ಕಾಸರಗೋಡು, ನ.03 (DaijiworldNews/PY): ಹಲವಾರು ಪ್ರಕರಣಗಳ ಆರೋಪಿಯೋರ್ವನನ್ನು ಕಾಸರಗೋಡು ಡಿ.ವೈ.ಎಸ್.ಪಿ ನೇತೃತ್ವದ ಪೊಲೀಸ್ ತಂಡ ಬಂಧಿಸಿದೆ.

ಬಂಧಿತನನ್ನು ಪೈವಳಿಕೆ ಕಳಾಯಿಯ ಹುಸೈನ್ (26) ಎಂದು ಗುರುತಿಸಲಾಗಿದೆ.
ಬೇಕೂರು ಕುಬಣೂರಿನಲ್ಲಿ ಜಲಪ್ರಾಧಿಕಾರದ ನೌಕರನ ಮೇಲೆ ಹಲ್ಲೆ, ಕಾರಿಗೆ ಹಾನಿ, ಬಳ್ಳೂರಿನಲ್ಲಿ ಹೋಟೆಲ್ ಕಾರ್ಮಿಕನ ಮೇಲೆ ಹಲ್ಲೆ ಸೇರಿದಂತೆ ಹಲವಾರು ಪ್ರಕರಣದ ಆರೋಪಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.