ಮಂಗಳೂರು, ನ. 03 (DaijiworldNews/SM): ಉಳ್ಳಾಲಕ್ಕೆ ತೆರಳಿದರೆ ಪಾಕಿಸ್ತಾನಕ್ಕೆ ಭೆಟಿ ನೀಡಿದ ಅನುಭವವಾಗುತ್ತದೆ ಎನ್ನುವ ಪ್ರಭಾಕರ್ ಭಟ್ ಹೇಳಿಕೆಗೆ ಶಾಸಕ ಖಾದರ್ ತಿರುಗೇಟು ನೀಡಿದ್ದಾರೆ. ಕಲ್ಲಡ್ಕ ಪ್ರಭಾಕರ್ ಭಟ್ಗೆ ವಯಸ್ಸಾಗಿರಬಹುದು. ಈ ಹಿನ್ನೆಲೆಯಲ್ಲಿ ಈ ಮಾತನ್ನು ಆಡಿರಬಹುದು ಎಂದು ವ್ಯಂಗ್ಯವಾಡಿದ್ದಾರೆ.

ಪ್ರಭಾಕರ್ ಭಟ್ ತಮ್ಮ ಮಾತಿನ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು. ಕಲ್ಲಡ್ಕ ಭಟ್ ಮಾತನ್ನು ಗಂಭೀರವಾಗಿ ತೆಗೆದುಕೊಳ್ಳಬಾರದು. ಪಾಕಿಸ್ತಾನದ ಹೆಸರನ್ನು ಹೇಳಲು ನಮಿಗೆ ನಾಚಿಕೆಯಾಗುತ್ತದೆ. ಹಿರಿಯ ವಯಸ್ಸಿನ ವ್ಯಕ್ತಿಯ ಈ ರೀತಿಯ ಹೇಳಿಕೆ ಸರಿಯಲ್ಲ ಎಂದು ಖಂಡಿಸಿದ್ದಾರೆ.
ಇನ್ನು ಉಳ್ಳಾಲ ಕ್ಷೇತ್ರದ ಜನರಿಗೆ ಈ ಹೇಳಿಕೆ ನೋವುಂಟು ಮಾಡಿದೆ. ಉಳ್ಳಾಲ ಪ್ರದೇಶದ ಧಾರ್ಮಿಕ ಕ್ಷೇತ್ರಗಳು ಬಹು ಸಂಸ್ಕೃತಿಯನ್ನು ಸಾರುತ್ತದೆ. ಎಲ್ಲಾ ಧರ್ಮದ ಧಾರ್ಮಿಕ ಕ್ಷೇತ್ರಗಳು ಉಳ್ಳಾಲ ನಗರ ಪ್ರದೇಶದಲ್ಲಿದೆ ಎಂದು ಮಂಗಳೂರಿನಲ್ಲಿ ಸಚಿವ ಯು.ಟಿ ಖಾದರ್ ಹೇಳಿದ್ದಾರೆ.