ಮಂಗಳೂರು, ನ. 04 (DaijiworldNews/MB) : ನವೆಂಬರ್ 5 ರಂದು ನಗರದಲ್ಲಿ ಬಿಜೆಪಿಯ ವಿಶೇಷ ರಾಜ್ಯ ಕಾರ್ಯಕಾರಿ ಸಭೆ ಮತ್ತು ಕೋರ್ ಕಮಿಟಿ ಸಭೆಯ ನಡೆಯಲಿದೆ. ಈ ಕಾರ್ಯಕ್ರಮಕ್ಕಾಗಿ ಆಗಮಿಸಲಿರುವ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಸೇರಿದಂತೆ ಇತರ ಗಣ್ಯರಿಗೆ ಆತ್ಮೀಯ ಸ್ವಾಗತ ಕೋರಲು ನಗರ ಸಜ್ಜಾಗಿದ್ದು ನಗರದೆಲ್ಲೆಡೆ ಅಲಂಕಾರ ಮಾಡಲಾಗಿದೆ.




ಎರಡು ದಶಕಗಳ ಅಂತರದ ನಂತರ ನಗರದಲ್ಲಿ ಬಿಜೆಪಿ ಕಾರ್ಯಕಾರಿ ಸಭೆ ಆಯೋಜಿಸಲಾಗುತ್ತಿದೆ. ಕೊಡಿಯಲ್ಬೈಲ್ನಲ್ಲಿರುವ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಕಚೇರಿಯನ್ನು ವರ್ಣರಂಜಿತ ದೀಪಗಳಿಂದ ಬೆಳಗಿಸಲಾಗಿದೆ. ನಗರದ ಎಲ್ಲಾ ಪ್ರಮುಖ ರಸ್ತೆಗಳು ಮತ್ತು ಪ್ರಮುಖ ವಲಯಗಳಲ್ಲಿ ಬಿಜೆಪಿ ಧ್ವಜಗಳಿಂದ ಅಲಂಕಾರ ಮಾಡಲಾಗಿದೆ. ಮುಖ್ಯಮಂತ್ರಿ ಹಾಗೂ ಪಕ್ಷದ ಹಿರಿಯ ಮುಖಂಡರಿಗೆ ಸ್ವಾಗತಕೋರಿ ನಗರದಲ್ಲಿ ಅಲ್ಲಲ್ಲಿ ಬ್ಯಾನರ್ಗಳನ್ನು ಕಾಣಬಹುದಾಗಿದೆ.
ಕದ್ರಿ, ಕೊಟ್ಟಾರ, ಲೇಡಿಹಿಲ್, ಪಂಪ್ವೆಲ್, ಲೈಟ್ ಹೌಸ್ ಹಿಲ್ ಮುಂತಾದೆಡೆ ಬೃಹತ್ ಕಟ್ಟಡಗಳ ಮೇಲೆ ದೀಪಗಳನ್ನು ಹಾಕಲಾಗಿದೆ. ಈ ದೀಪಗಳು ಬಿಜೆಪಿ ಧ್ವಜದ ಕೇಸರಿ ಮತ್ತು ಹಸಿರು ಬಣ್ಣದಲ್ಲಿದೆ.