ವಿಟ್ಲ, ನ. 04 (DaijiworldNews/HR): ಕೋರೆಯಿಂದ ಜಲ್ಲಿ ಸಾಗಾಟ ಮಾಡುತ್ತಿದ್ದ ಟಿಪ್ಪರ್ ಲಾರಿ ರಸ್ತೆಯಲ್ಲಿ ಪಲ್ಟಿ ಹೊಡೆದ ಪರಿಣಾಮ ಚಾಲಕ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಮತ್ತೊಬ್ಬ ಸಣ್ಣಪುಟ್ಟ ಗಾಯಗೊಂಡ ಘಟನೆ ಪುಣಚ ಬುಳೇರಿಕಟ್ಟೆ ರಸ್ತೆಯಲ್ಲಿ ಸಂಭವಿಸಿದೆ.



ಪುಣಚ ಸಮೀಪ ಇರುವ ಕೋರೆಯಿಂದ ಜಲ್ಲಿ ಸಾಗಾಟ ಮಾಡುತ್ತಿದ್ದ ವೇಳೆ ಪುಣಚ ಗ್ರಾಮದ ಪಾಲತ್ತಡ್ಕ ಎಂಬಲ್ಲಿ ನಿಯಂತ್ರಣ ಕಳೆದು ರಸ್ತೆಗೆ ಉರುಳಿ ಬಿದ್ದಿದೆ. ಚಾಲಕ ಟಿಪ್ಪರ್ ಕೆಳಗಡೆ ಹಲವು ಸಮಯಗಳ ವರೆಗೆ ಸಿಕ್ಕಿಹಾಕಿಕೊಂಡಿದ್ದು, ಬಳಿಕ ಮೃತಪಟ್ಟಿದ್ದಾರೆ. ಬಳಿಕ ಸ್ಥಳೀಯರ ಸಹಕಾರದಲ್ಲಿ ಮೃತದೇಹ ಮೇಲೆತ್ತಲಾಯಿತು. ಮತ್ತೊಬ್ಬ ಕ್ಲೀನರ್ ಗಾಯಗೊಂಡಿದ್ದಾರೆ. ಚಾಲಕನ ವಿವರ ನಿರೀಕ್ಷಸಲಾಗುತ್ತಿದೆ. ಸ್ಥಳಕ್ಕೆ ವಿಟ್ಲ ಪೊಲೀಸರು ಭೇಟಿ ನೀಡಿದ್ದಾರೆ.
ಪುಣಚ ಸುತ್ತಮುತ್ತಲಿನಲ್ಲಿ ಹಲವು ಕಲ್ಲಿನ ಕೋರೆಗಳಿಂದ ಕೇರಳ ಕಡೆಗೆ ನಿರಂತರವಾಗಿ ಜಲ್ಲಿ ಸಾಗಾಟ ಮಾಡಲಾಗುತ್ತಿದೆ. ಜಲ್ಲಿ ಕಲ್ಲು ಸಾಗಾಟ ಮಾಡುವ ಲಾರಿಗಳು ಅತೀವೇಗವಾಗಿ ಸಂಚಾರ ಮಾಡುತ್ತಿದೆ. ಇದರಿಂದ ಪಾದಚಾರಿಗಳು ಹಾಗೂ ಚಿಕ್ಕ ಚಿಕ್ಕ ವಾಹನ ಚಾಲಕರು ಆತಂಕ ಪಡುವಂತಾಗಿದೆ.