ಉಡುಪಿ, ನ. 04 (DaijiworldNews/MB) : ಉಡುಪಿಯ ಬಸ್ ಮಾಲೀಕರೊಬ್ಬರ ಕಚೇರಿಗೆ ನುಗ್ಗಿ ಬೆದರಿಸಲು ಯತ್ನಿಸಿದ ಘಟನೆ ನ. 4 ರ ಬುಧವಾರ ನಡೆದಿದೆ.

ಮಣಿಪಾಲದ ಲಕ್ಷಿಂದ್ರನಗರದಲ್ಲಿರುವ ಎಕೆಎಂಎಸ್ ಬಸ್ ಮಾಲೀಕ ಸೈಫ್ ಕಚೇರಿಗೆ ನುಗ್ಗಿ ಬೆದರಿಸಲು ಯತ್ನಿಸಲಾಗಿದೆ.
ಈ ತಂಡವು ಮಾರಕಾಸ್ತ್ರವನ್ನು ಹೊಂದಿದ್ದು ಕಚೇರಿಯಲ್ಲಿ ಎಕೆಎಂಎಸ್ ಬಸ್ ಮಾಲೀಕ ಸೈಫ್ ಇಲ್ಲದ ಸಂದರ್ಭದಲ್ಲಿ ಬಂದಿದ್ದು ಬಳಿಕ ವಾಪಾಸ್ ತೆರಳಿದೆ ಎಂದು ತಿಳಿದು ಬಂದಿದೆ.
ಯಾವುದೋ ಪೂರ್ವದ್ವೇಷದಿಂದ ಈ ತಂಡವು ಬೆದರಿಕೆ ಹಾಕಲು ಯತ್ನಿಸಿದೆ ಎಂದು ಹೇಳಲಾಗಿದೆ.
ಇನ್ನು ಈ ಘಟನೆ ನಡೆದ ಸಂದರ್ಭದಲ್ಲಿ ಸೈಫ್ ಕಚೇರಿ ಹೊರಗಡೆ ಕಾರಿನಲ್ಲಿ ಕುಳಿತಿದ್ದು ಕೂಡಲೇ ಮಣಿಪಾಲ ಪೋಲಿಸರಿಗೆ ಮಾಹಿತಿ ನೀಡಿದ್ದಾರೆ.
ತಂಡವು ಚಾಕೋಲೆಟ್ ಬಣ್ಣದ ಡಸ್ಟರ್ ಕಾರಿನಲ್ಲಿ ಬಂದಿದ್ದು ಪರಾರಿಯಾಗಿದೆ. ಮಣಿಪಾಲ ಪೊಲೀಸರು ಸೈಫ್ ಜೊತೆಗೆ ತಂಡದ ಪತ್ತೆ ಕಾರ್ಯಚರಣೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.