ಮಂಗಳೂರು ಸೆ24: ಅಭಿವೃದ್ಧಿ ,ಅರಣ್ಯೀಕರಣ ಹಾಗೂ ಪರಿಸರ ಕಾಳಜಿ ಜತೆ ಜತೆಯಾಗಿ ಸಾಗಿಬೇಕು ಎಂದು ಶಾಸಕ ಜೆ.ಆರ್.ಲೋಬೋ ಹೇಳಿದರು.ಅವರು ಇಂದು ನಗರದ ಪಾದುವ ಪದವಿ ಕಾಲೇಜು ಸಭಾಭವನದಲ್ಲಿ ನಡೆದ ಗ್ರೀನ್ ಒಝೋನ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಮಂಗಳೂರು ಮತ್ತು ಮಂಗಳೂರು ಮಹಾನಗರ ಪಾಲಿಕೆ ಬೃಹತ್ ಮಟ್ಟದ ಸಸಿ ನೆಡುವ ಕಾರ್ಯಕ್ರಮಕ್ಕೆ ಗಿಡ ನೆಡುವ ಮೂಲಕ ಚಾಲನೆ ನೀಡಿ ಮಾತನಾಡಿ, ನಗರ ಬೆಳೆಯುತ್ತಿದ್ದಂತೆ ಹಸಿರು ಕಣ್ಮರೆಯಾಗುತ್ತಿರುವುದು ಕಳವಳಕಾರಿಯಾದ ವಿಚಾರ. ಪ್ರಕೃತಿ ಎಂದಿಗೂ ಸ್ವಾರ್ಥವನ್ನು ಬಯಸುವುದಿಲ್ಲ. ಅಭಿವೃದ್ಧಿಗಾಗಿ ಮರಗಳನ್ನು ಕಡಿಯಬೇಕು ಆದರೆ ಕಡಿದ ಮರಕ್ಕಿಂತ ಜಾಸ್ತಿ ಪ್ರಮಾಣದಲ್ಲಿ ಮರಗಿಡಗಳನ್ನು ನೆಟ್ಟು ಬೆಳೆಸುವ ಪರಿಪಾಟ ಬೆಳೆಸಿಕೊಳ್ಳುವುದು ಅಗತ್ಯ ಅರಣ್ಯೀಕರಣ ಎನ್ನುವುದು ನಮ್ಮ ಬದುಕಿಗೆ ಅನಿವಾರ್ಯವಾದ ವಿಚಾರ ಎಂದರು.
ಕಾರ್ಯಕ್ರಮದಲ್ಲಿ ಸಸ್ಯ ಜೀವ ವೈವಿಧ್ಯ ಪಶ್ಚಿಮ ಘಟ್ಟ ಕುರಿತು ವಿಟ್ಲ ಸಸ್ಯ ಶ್ಯಾಮಲದ ದಿನೇಶ್ ನಾಯಕ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದರು. .ಇದೇ ಸಂದರ್ಭದಲ್ಲಿ ಆರ್ಎಫ್ಒ ಶ್ರೀಧರ್ ಪಿ ಅವರು ಗ್ರೀನ್ ಒಝೋನ್ ಚಾರಿಟೇಬಲ್ ಟ್ರಸ್ಟ್ನ ವೆಬ್ಸೈಟ್ ಅನಾವರಣ ಮಾಡಿದರು. ಮನಪಾ ಸದಸ್ಯರಾದ ರೂಪಾ ಡಿ ಬಂಗೇರಾ, ಶ್ರೀರಾಮ ವಿದ್ಯಾಕೇಂದ್ರ ಟ್ರಸ್ಟ್ ಕಲ್ಲಡ್ಕ ಇದರ ಸದಸ್ಯ ಶ್ರೀಕರ ಪ್ರಭು, ನ್ಯಾಯವಾದಿ ರಾಜೇಶ್ ಕುಮಾರ್ ಅಮ್ಟಾಡಿ, ವಾಣಿಜ್ಯ ಖಾತೆದಾರ ಮತ್ತು ತೆರಿಗೆ ಪ್ರಾತಿನಿಧಿಕಾರ ಜೋಯೆಲ್ ಆರ್ ಸಲ್ಡಾನಾ, ಲೂರ್ಡ್ಸ್ ಸ್ವಾಮಿ ಮೈಸೂರು, ಗ್ರೀನ್ ಒಝೋನ್ ಚಾರಿಟೇಬಲ್ ಟ್ರಸ್ಟ್ನ ಅಧ್ಯಕ್ಷ ರಂಜಿತ್ ಮರೋಳಿ, ಮುಂತಾದ ಗಣ್ಯರು ಉಪಸ್ಥಿತರಿದ್ದರು.