ಕಾಸರಗೋಡು, ನ. 07 (DaijiworldNews/MB) : ವಂಚನೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಂಜೇಶ್ವರ ಶಾಸಕ ಎಂ. ಸಿ ಕಮರುದ್ದೀನ್ರನ್ನು ಶೀಘ್ರ ಬಂಧಿಸುವ ಸಾಧ್ಯತೆ ಇದೆ.

ಶಾಸಕರನ್ನು ವಿಶೇಷ ತನಿಖಾ ತಂಡ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ವಿಚಾರಣೆ ನಡೆಸುತ್ತಿದ್ದು, ಪಿ. ವಿವೇಕ್ ಕುಮಾರ್ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ. ತನಿಖಾ ತಂಡಕ್ಕೆ ಮಹತ್ವದ ಮಾಹಿತಿಗಳು ಲಭಿಸಿದ್ದು, ಈ ಹಿನ್ನಲೆಯಲ್ಲಿ ಕಮರುದ್ದೀನ್ ನನ್ನು ಬಂಧಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಫ್ಯಾಶನ್ ಗೋಲ್ಡ್ ಇಂಟರ್ ನ್ಯಾಷನಲ್ ಕಂಪೆನಿ ಹೆಸರಿನಲ್ಲಿ ಸುಮಾರು 130 ಕೋಟಿ ರೂ. ಗಳಷ್ಟು ವಂಚನೆ ನಡೆದಿದ್ದು, ಸುಮಾರು 700 ಮಂದಿಯಿಂದ ಠೇವಣಿ ಪಡೆಯಲಾಗಿದೆ. ಈ ಪೈಕಿ 109 ಪ್ರಕರಣಗಳು ಈಗಾಗಲೇ ದಾಖಲಾಗಿದ್ದು, 15 ಕೋಟಿ ರೂ. ಗಳ ವಂಚನೆ ನಡೆದಿರುವುದು ಬೆಳಕಿಗೆ ಬಂದಿದೆ.