ಮಂಗಳೂರು, ನ. 08 (DaijiworldNews/HR): ದಿವಂಗತ ಜಾರ್ಜ್ ಫೆರ್ನಾಂಡಿಸ್ ಅವರ ನೆನಪಿಗಾಗಿ ಹೊಸದಾಗಿ ನಿರ್ಮಿಸಲಾದ ಬಸ್ ತಂಗುದಾಣವನ್ನು ಜಾರ್ಜ್ ಫೆರ್ನಾಂಡಿಸ್ ಅಭಿಮಾನಿ ಬಳಗ ಭಾನುವಾರ ಕರಂಬಾರುನಲ್ಲಿ ಉದ್ಘಾಟಿಸಿದರು.








ಜಾರ್ಜ್ ಫೆರ್ನಾಂಡಿಸ್ ಅವರ ಸಹೋದರ ಮೈಕೆಲ್ ಬಿ ಫೆರ್ನಾಂಡಿಸ್ ಹೊಸದಾಗಿ ನಿರ್ಮಿಸಿದ ಕರಂಬಾರ್ ಶಾಲಾ ಬಸ್ ನಿಲ್ದಾಣವನ್ನು ಉದ್ಘಾಟಿಸಿ ಬಳಿಕ ಮಾತನಾಡಿದ ಅವರು, "ಜಾರ್ಜ್ ಫೆರ್ನಾಂಡಿಸ್ ತಮ್ಮ ರಾಜಕೀಯ ಜೀವನದಲ್ಲಿ ಜಾತಿ, ಮತ, ಸಮುದಾಯ ಅಥವಾ ಪಕ್ಷವೆಂದು ಜನರಲ್ಲಿ ಎಂದಿಗೂ ತಾರತಮ್ಯ ಮಾಡಲಿಲ್ಲ. ರಾಜಕೀಯ ಲಾಭಗಳ ಬಗ್ಗೆ ಯೋಚಿಸದೆ ಅವರು ಜನರ ಮತ್ತು ಸಮಾಜದ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಜಾರ್ಜ್ ಸ್ವಾತಂತ್ರ್ಯ ಹೋರಾಟಗಾರ ಮತ್ತು ಸಮಾಜವಾದಿ ಅಮ್ಮೆಂಬಲ್ ಬಾಲಪ್ಪ ಅವರ ಪ್ರಭಾವದಿಂದ ಮಂಗಳೂರಿನಲ್ಲಿ ಸಮಾಜವಾದಿ ಪಕ್ಷ ಮತ್ತು ಕಾರ್ಮಿಕ ಚಳವಳಿಗೆ ಸೇರಿ ಬಳಿಕ ಮುಂಬೈಗೆ ತೆರಳಿದರು ಎಂದು ಎಂದು ಹೇಳಿದ್ದಾರೆ
ಇನ್ನು ಜಾರ್ಜ್ ಫೆರ್ನಾಂಡಿಸ್ ಅವರು ತುರ್ತು ಸಮಯದಲ್ಲಿ 11 ತಿಂಗಳು ಅಡಗಿಕೊಳ್ಳಬೇಕಾಗಿತ್ತು, ನಂತರ ಅವರನ್ನು 1976 ರಲ್ಲಿ ಕೋಲ್ಕತ್ತಾದ ಚರ್ಚ್ನಿಂದ ಬಂಧಿಸಲಾಯಿತು ಎಂದು ನೆನಪಿಸಿಕೊಂಡರು.
1974 ರಲ್ಲಿ ಭಾರತದಲ್ಲಿ ಕಾರ್ಮಿಕ ಚಳವಳಿ ಸಂದರ್ಭದಲ್ಲಿ ಜಾರ್ಜ್ ಫೆರ್ನಾಂಡಿಸ್ 14 ಲಕ್ಷ ಜನರನ್ನು ಮುಷ್ಕರಕ್ಕೆ ಕರೆದೊಯ್ದಿದ್ದರು, ಸಂವಹನ, ಕೈಗಾರಿಕೆ, ರೈಲ್ವೆ ಮತ್ತು ರಕ್ಷಣಾ ಸೇರಿದಂತೆ ಜಾರ್ಜ್ ಅವರ ಹಲವಾರು ಮಂತ್ರಿಮಂಡಲಗಳ ಬಗ್ಗೆಯೂ ಜಾರ್ಜ್ ಹೆಸರು ಮಾಡಿದ್ದರು ಎಂದರು.
ಇನ್ನು ಜಾರ್ಜ್ ಫೆರ್ನಾಂಡಿಸ್ ನೆನಪಿಗಾಗಿ ಅವರ ಅಭಿಮಾನಿ ಬಳಗ ಅವರು ನಿರ್ಮಿಸಿದ ಬಸ್ ನಿಲ್ದಾಣವು ಜಾರ್ಜ್ ಫೆರ್ನಾಂಡಿಸ್ಗೆ ನೀಡಿದ ಅತ್ಯುತ್ತಮ ಕೊಡುಗೆಯಾಗಿದೆ ಎಂದು ಅವರು ಹೇಳಿದ್ದಾರೆ
ಬಳಿಕ ಶಾಸಕ ಉಮಾನಾಥ್ ಕೊಟ್ಯಾನ್ ಮಾತನಾಡಿ, "ಜಾರ್ಜ್ ದಮನಿತ ವರ್ಗಕ್ಕೆ ನ್ಯಾಯ ಒದಗಿಸಲು ಕಾರ್ಮಿಕ ಚಳವಳಿಯನ್ನು ಪ್ರಾರಂಭಿಸಿದರು. ಅಟಲ್ ಬಿಹಾರಿ ವಾಜಪೇಯಿ ಮತ್ತು ಜಾರ್ಜ್ ಫೆರ್ನಾಂಡಿಸ್ ಇಬ್ಬರೂ ಶ್ರೇಷ್ಠ ನಾಯಕರು. ಜಾರ್ಜ್ ಅವರ ಕಠಿಣ ಪರಿಶ್ರಮದಿಂದಾಗಿ ಕನಸಿನ ಕೊಂಕಣ ರೈಲ್ವೆ ಯೋಜನೆ ಸಾಕಾರಗೊಂಡಿದೆ ಎಂದು ಹೇಳಿದ್ದಾರೆ
ಕಾಂಗ್ರೆಸ್ ಮುಖಂಡ ಮಿಥುನ್ ರೈ ಮಾತನಾಡಿ, "ಜಾರ್ಜ್ ಅವರ ಕೊಡುಗೆಯನ್ನು ಜೀವಂತವಾಗಿಡಲು, ಅವರ ಶಾಶ್ವತ ಪ್ರತಿಮೆಯನ್ನು ಮಂಗಳೂರಿನಲ್ಲಿ ಸ್ಥಾಪಿಸುವ ಅವಶ್ಯಕತೆಯಿದೆ. ಹೀಗಾಗಿ, ಶಾಸಕ ಉಮಾನಾಥ್ ಕೋಟ್ಯಾನ್ ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ನಿಟ್ಟಿನಲ್ಲಿ ಅವರು ಮಂಗಳೂರಿನಲ್ಲಿ ಜಾರ್ಜ್ ಅವರ ಪ್ರತಿಮೆಯನ್ನು ಸ್ಥಾಪಿಸುವುದಕ್ಕಾಗಿ ಮುಖ್ಯಮಂತ್ರಿಯನ್ನು ಭೇಟಿ ಮಾಡಲಿದ್ದಾರೆ ಎಂದು ಹೇಳಿದ್ದಾರೆ.
ತಾಲ್ಲೂಕು ಪಂಚಾಯತ್ ಸದಸ್ಯೆ ಸುಪ್ರಿತಾ ಶೆಟ್ಟಿ, ಜಾರ್ಜ್ ಫೆರ್ನಾಂಡಿಸ್ ಅಭಿಮಾನಿ ಬಾಳಗದ ಅಧ್ಯಕ್ಷ ಜಗನಾಥ್ ಸಾಲಿಯನ್, ಉಪಾಧ್ಯಕ್ಷ ವಾಲ್ಟರ್ ಮೊಂತೆರೋ, ಮತ್ತು ಇತರರು ಉಪಸ್ಥಿತರಿದ್ದರು.