ಕಾಸರಗೋಡು,ನ. 08 (DaijiworldNews/HR): ಜಿಲ್ಲೆಯಲ್ಲಿ ಆದಿತ್ಯವಾರ 159 ಮಂದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದ್ದು, 158 ಮಂದಿಗೆ ಸಂಪರ್ಕದಿಂದ ಸೋಂಕು ತಗಲಿದೆ.

ಇದುವರೆಗೆ ಜಿಲ್ಲೆಯಲ್ಲಿ 19,715 ಮಂದಿಗೆ ಸೋಂಕು ತಗಲಿದ್ದು, 17981 ಮಂದಿಗೆ ಸಂಪರ್ಕದಿಂದ ಸೋಂಕು ದೃಢಪಟ್ಟಿದೆ.
ಇನ್ನು ವಿದೇಶಗಳಿಂದ ಬಂದ 983, ಹೊರ ರಾಜ್ಯಗಳಿಂದ ಬಂದ 751 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ.
17,979 ಮಂದಿ ಗುಣಮುಖರಾಗಿದ್ದು, 1532 ಮಂದಿ ಈಗ ಚಿಕಿತ್ಸೆಯಲ್ಲಿದ್ದಾರೆ. 4,242 ಮಂದಿ ನಿಗಾದಲ್ಲಿದ್ದಾರೆ.