ಮಂಗಳೂರು, ನ. 08 (DaijiworldNews/SM): ನೀರಿನಲ್ಲಿ ಮುಳುಗಿ ಯುವಕ ಮೃತಪಟ್ಟಿರುವ ಘಟನೆ ಮೂಡಬಿದ್ರಿಯ ಬೆಳುವಾಯಿ ಎಂಬಲ್ಲಿ ನಡೆದಿದೆ. ಸುರತ್ಕಲ್ ಕಾಟಿಪಳ್ಳ ನಿವಾಸಿ ನಿಹಾಲ್ ಶಾ(20) ಮೃತಪಟ್ಟ ಯುವಕ.

ಮಠದಕೆರೆ ಎಂಬಲ್ಲಿ ನೀರಲ್ಲಿ ಮುಳುಗಿ ನಿಹಾಲ್ ಶಾ ಸಾವನ್ನಪ್ಪಿದ್ದಾರೆ. ಸ್ನೇಹಿತರ ಜೊತೆಗೂಡಿ ನಿಹಾಲ್ ಈಜಲು ತೆರಳಿದ್ದರು. ಕೆರೆಗೆ ಇಳಿದಿದ್ದ ವೇಳೆ ನಿಹಾಲ್ ನೀರುಪಾಲಾಗಿದ್ದ ಎಂದು ತಿಳಿದುಬಂದಿದೆ. ಸ್ಥಳೀಯ ಈಜುಗಾರ ಅಂಥೋಣಿ ಮೃತದೇಹ ಮೇಲಕ್ಕೆತ್ತಿದ್ದಾರೆ.
ಮೂಡಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.