ಕಾಸರಗೋಡು,ನ.09 (DaijiworldNews/HR): ಮಂಜೇಶ್ವರ ಕುಂಜತ್ತೂರು ಪದವಿನಲ್ಲಿ ಸ್ಕೂಟರ್ ಮಗುಚಿ ಬಿದ್ದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಗದಗ ಮೂಲದ ಯುವಕ ಮೃತದೇಹವನ್ನು ಮರಣೋತ್ತರ ಪರೀಕ್ಷೆ ನಡೆಸಿದ್ದು, ಇದೀಗ ಕೊಲೆ ಎಂದು ಸಾಬೀತಾಗಿದೆ.

ತಲಪಾಡಿ ದೇವಿನಗರದಲ್ಲಿ ವಾಸವಾಗಿದ್ದ ಹನುಮಂತ ( 35 ) ಮೃತಪಟ್ಟ ಯುವಕ.
ಶನಿವಾರ ಮುಂಜಾನೆ ಕುಂಜತ್ತೂರು ಪದವಿನ ರಸ್ತೆಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಸ್ಕೂಟರ್ ಅಪಘಾತದಿಂದ ಮೃತಪಟ್ಟಿರುವುದಾಗಿ ಸಂಶಯಿಸಲಾಗಿತ್ತು. ತಲೆಗೆ ಸಣ್ಣಪುಟ್ಟ ಗಾಯ ಹಾಗೂ ಸ್ಕೂಟರ್ಗೆ ಹಾನಿಯಾಗದ ಹಿನ್ನಲೆಯಲ್ಲಿ ಸಂಶಯ ಉಂಟಾಗಿತ್ತು.
ಬಳಿಕ ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಕಣ್ಣೂರು ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕೊಂಡೊಯ್ಯಲಾಗಿತ್ತು. ಮರಣೋತ್ತರ ಪರೀಕ್ಷಾ ವರದಿ ಮಂಜೇಶ್ವರ ಪೊಲೀಸರಿಗೆ ಲಭಿಸಿದ್ದು , ಕುತ್ತಿಗೆಯನ್ನು ಬಿಗಿದ ಎರಡು ಬೆರಳಿನ ಗುರುತು ಪತ್ತೆಯಾಗಿದ್ದು, ಕತ್ತು ಹಿಸುಕಿ ಕೊಲೆಗೈದಿರುವುದಾಗಿ ಸಂಶಯಿಸಲಾಗಿದೆ.
ಈ ಹಿನ್ನಲೆಯಲ್ಲಿ ಹನುಮಂತನ ಮನೆಗೆ ಆಗಾಗ ಬರುತ್ತಿದ್ದ ಓರ್ವ ಸಂಬಂಧಿಕನನ್ನು ಕೇಂದ್ರೀಕರಿಸಿ ತನಿಖೆ ನಡೆಯುತ್ತಿದೆ. ಈತನ ಹಾಗೂ ಹನುಮಂತನ ಮೊಬೈಲ್ ಕೇಂದ್ರೀಕರಿಸಿ ತನಿಖೆ ನಡೆಸಲಾಗುತ್ತಿದ್ದು, ಇದಕ್ಕೆ ಸೈಬರ್ ಸೆಲ್ನ ನೆರವು ಪಡೆಯಲಾಗಿದೆ.
ಇನ್ನು ಮಂಗಳೂರು ಕೊಡಿಯಾಲ್ ಬೈಲ್ನ ಕ್ಯಾಂಟೀನ್ವೊಂದರಲ್ಲಿ ದುಡಿಯುತ್ತಿದ್ದ ಹನುಮಂತ ಹಲವು ವರ್ಷಗಳಿಂದ ದೇವಿನಗರದಲ್ಲಿ ವಾಸವಾಗಿದ್ದನು.