ಉಡುಪಿ, ನ.09 (DaijiworldNews/HR): 13 ವರ್ಷಗಳಿಂದ ಪ್ರೀತಿಸಿ ಮದುವೆಯ ದಿನ ಯುವಕ ಮಂಟಪಕ್ಕೆ ಬಾರದೆ ಕಾಣೆಯಾಗಿರುವ ಘಟನೆ ಉಡುಪಿಯಲ್ಲಿ ನಡೆದಿದೆ.


13 ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ಪರ್ಕಳದ ಗಣೇಶ್ ಎಂಬ ಯುವಕ ಮಮತ ಎಂಬ ಯುವತಿಯ ಜೊತೆ ವಿವಾಹ ಜೀವನಕ್ಕೆ ಕಾಲಿಡಬೇಕಿತ್ತು. ಆದರೆ ಗಣೇಶ್ ಮದುವೆಯ ದಿನದಂದೆ ಮಂಟಪಕ್ಕೆ ಬಾರದೆ ಕಾಣೆಯಾಗಿದ್ದು, ಮದುವೆ ಕಾರ್ಯವನ್ನು ರದ್ದುಗೊಳಿಸಿ ಇದೀಗ ಯುವತಿ ಗಣೇಶನ ಮನೆಯ ಮುಂದೆ ಪ್ರತಿಭಟನೆ ನಡೆಸುತ್ತಿದ್ದಾಳೆ.
ಗಣೇಶ್ ಆಕೆಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿ, 13 ವರ್ಷಗಳಿಂದಲೂ ಮದುವೆಯಾಗುವುದುದಾಗಿ ನಂಬಿಸಿದ್ದಾನೆ.
ಈ ಸಂಬಂಧದ ಪರಿಣಾಮವಾಗಿ, ಹುಡುಗಿ ಎರಡು ಬಾರಿ ಗರ್ಭಿಣಿಯಾಗಿದ್ದು, ಅದನ್ನು ಗಣೇಶ್ ಅಬಾರ್ಷನ್ ಮಾಡಿಸಿದ್ದಾನೆ. ಆದರೆ ಯುವತಿಯ ಒತ್ತಾಯದ ಮೇರೆಗೆ ಆತ ಮದುವೆಗೆ ಒಪ್ಪಿಕೊಂಡಿದ್ದ ಎಂದು ಹೇಳಲಾಗಿದೆ.
ನವೆಂಬರ್ 6 ರಂದು ಮದುವೆ ನಿಶ್ಚಯವಾಗಿತ್ತು, ಆದರೆ ಗಣೇಶ್ ನವೆಂಬರ್ 4 ರಂದು ಇನ್ನೊಬ್ಬ ಹುಡುಗಿಯೊಂದಿಗೆ ಮದುವೆಯಾಗಲು ಸಿದ್ದತೆ ನಡೆಸಿಕೊಂಡಿದ್ದ. ಬಳಿಕ ಈ ವಿಷಯ ತಿಳಿದ ಮಮತ ಮಣಿಪಾಲ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರೊಂದಿಗೆ ನ. 6 ರಂದು ಮಮತ ಅವರನ್ನು ವಿವಾಹ ಆಗುವುದಾಗಿ ಒಪ್ಪಿಕೊಂಡಿದ್ದಾನೆ.
ನ. 6 ರಂದು ಯುವತಿ ಮದುವೆಗೆ ಸಿದ್ದತೆ ಮಾಡಿಕೊಂಡು ಮಂಟಪವನ್ನು ತಲುಪಿದಾಗ ವರ ಅಲ್ಲಿಂದ ನಾಪತ್ತೆಯಾಗಿದ್ದಾನೆ. ಬಳಿಕ ಯುವತಿಯ ಕುಟುಂಬ ಸದಸ್ಯರು ಆತನ ಮನೆಗೆ ಹೋಗಿ ಆತ ನಾಪತ್ತೆಯಾಗಿದ್ದನ್ನು ತಿಳಿಸಿದ್ದಾರೆ. ಆದರೆ ಆತನ ಫೋನ್ ಕೂಡ ಸಹ ಸ್ವಿಚ್ ಆಫ್ ಆಗಿತ್ತು. ಯುವತಿಯು ಅವನನ್ನು ಪತ್ತೆಹಚ್ಚಲು ಮಾಡಿದ ಎಲ್ಲಾ ಪ್ರಯತ್ನಗಳು ವಿಫಲವಾದ ನಂತರ, ಅವನ ಮನೆಯ ಮುಂದೆ ಪ್ರತಿಭಟನೆ ನಡೆಸಿದ್ದಾಳೆ.