ಉಡುಪಿ, ನ. 09 (DaijiworldNews/SM): ಸಮುದ್ರಪಾಲಾಗುತ್ತಿದ್ದ ಮೂವರು ಯುವಕರನ್ನು ರಕ್ಷಿಸಿರುವ ಘಟನೆ ಇಲ್ಲಿನ ಮಲ್ಪೆ ಬೀಚಿನಲ್ಲಿ ನಡೆದಿದೆ.



ಬೆಂಗಳೂರಿನಿಂದ ಬಂದಿದ್ದ ಹತ್ತು ಮಂದಿ ಪ್ರವಾಸಿಗರ ತಂಡ ಮಲ್ಪೆ ಬೀಚ್ ಗೆ ತೆರಳಿದ್ದರು. ಈ ವೇಳೆ ಪ್ರವಾಸಿಗರ ತಂಡದಲ್ಲಿದ್ದ ಯುವತಿ ನೀರಿನಲ್ಲಿ ಮುಳುಗಿದ್ದಾಳೆ. ತಕ್ಷಣ ಇಬ್ಬರು ಯುವಕರು ಯುವತಿಯ ರಕ್ಷಣೆಗೆ ಧಾವಿಸಿದ್ದಾರೆ.ಈಜಲು ಬಾರದ ಕಾರಣ ಮೂವರು ಕೂಡ ಸಮುದ್ರಪಾಲಾಗುತ್ತಿದ್ದರು. ಈ ವೇಳೆ ಜೆಟ್ ಸ್ಕೀ, ಪ್ರವಾಸೀ ದೋಣಿಯವರು ನೆರವಾಗಿದ್ದು, ಸಮುದ್ರ ಪಾಲಾಗುತ್ತಿದ್ದ ಮೂವರನ್ನು ರಕ್ಷಿಸಿದ್ದಾರೆ. ಅಲ್ಲದೆ, ಆಂಬುಲೆನ್ಸ್ ಮೂಲಕ ಖಾಸಗಿ ಆಸ್ಪತ್ರೆಗೆ ರವಾನಿಸಿದ್ದಾರೆ.
ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.