ಮಂಗಳೂರು, ನ.10 (DaijiworldNews/HR): ಮತದಾರರ ಎದುರು ಬಂಡೆ, ಹುಲಿಯಾ, ಟ್ರಬಲ್ ಶೂಟರ್ ಯಾವುದೂ ನಡೆಯಲ್ಲ, ಅಹಂಕಾರದ ಗೂಂಡಾಗಿರಿ ಎಂದಿಗೂ ನಡೆಯುವುದಿಲ್ಲ ಎಂಬುದನ್ನು ಉಪಚುನಾವಣೆ ಫಲಿತಾಂಶ ತೋರಿಸಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.

ಈ ಕುರಿತು ಮಂಗಳೂರಿನಲ್ಲಿ ನಡೆದ ಬಿಜೆಪಿ ವಿಜಯೋತ್ಸವದಲ್ಲಿ ಭಾಗವಹಿಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಪಚುನಾವಣೆಯ ಫಲಿತಾಂಶ ಕಾರ್ಯಕರ್ತರ ಮತ್ತು ಪಕ್ಷದ ಮುಖಂಡರ ಶ್ರಮದಿಂದ ಸಿಕ್ಕ ಗೆಲುವು. ಕಾಂಗ್ರೆಸ್ ನ ನಾಯಕರು ಅವರೇ ಹೇಳಿಕೊಂಡಂತಹ ಬಂಡೆ, ಹುಲಿಗಳು ಸೋತಿದ್ದು, ಸಾಮಾನ್ಯ ಕಾರ್ಯಕರ್ತರಿಗೆ ಜನ ಆಶೀರ್ವಾದ ಮಾಡಿದ್ದಾರೆ ಎಂದರು.
ಇನ್ನು ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಿ ಎಸ್. ಯಡಿಯೂರಪ್ಪ ಅವರ ಅಭಿವೃದ್ದಿ ಕೆಲಸಕ್ಕೆ ಜನ ಆಶೀರ್ವಾದ ನೀಡಿದ್ದಾರೆ ಎಂದು ಹೇಳಿದ್ದಾರೆ.