ಕಾಸರಗೋಡು, ನ.10 (DaijiworldNews/HR): ಫ್ಯಾಶನ್ ಗೋಲ್ಡ್ ಜುವೆಲ್ಲರಿ ವಂಚನೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಂಧಿತರಾಗಿ ಇದೀಗ ಪೊಲೀಸ್ ಕಸ್ಟಡಿಯಲ್ಲಿರುವ ಮಂಜೇಶ್ವರ ಶಾಸಕ ಎಂ. ಸಿ ಕಮರುದ್ದೀನ್ನನ್ನು ವಿಶೇಷ ತನಿಕಾ ತಂಡ ಮಾಹಿತಿ ಕಲೆ ಹಾಕುತ್ತಿದೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ವಿಚಾರಣೆ ನಡೆಸಲಾಗುತ್ತಿದ್ದು, ವಿಚಾರಣೆಗಾಗಿ ಹೊಸದುರ್ಗ ನ್ಯಾಯಾಲಯ ನಿನ್ನೆ ಎರಡು ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಿತ್ತು.
ಠೇವಣಿದಾರರ ಹಣ ಬಳಸಿ ಬೆಂಗಳೂರಿನಲ್ಲಿ ಸ್ಥಳ ಖರೀದಿ ಹಾಗೂ ಆಸ್ತಿ ಸಂಪಾದನೆಯ ಮಾಹಿತಿ, ಅಕ್ರಮ ವ್ಯವಹಾರ ಬಗ್ಗೆ ಮಾಹಿತಿ ಕಲೆ ಹಾಕುತ್ತಿದೆ.
ಕಮರುದ್ದೀನ್ ವಿರುದ್ಧ ಇನ್ನಷ್ಟು ಕೇಸುಗಳನ್ನು ಹೂಡಲು ಪೊಲೀಸರು ತೀರ್ಮಾನಿಸಿದ್ದು, ಈಗಾಗಲೇ 116 ಮಂದಿ ದೂರು ನೀಡಿದ್ದಾರೆ.
ಈ ಪ್ರಕರಣದಲ್ಲಿ 13ಕೋಟಿ ರೂ. ಗಳಷ್ಟು ವಂಚನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ನಡುವೆ ಪ್ರಮುಖ ಆರೋಪಿ ಟಿ. ಕೆ ಪೂಕೋಯ ತಂಘಳ್ ಜಿಲ್ಲೆಯಿಂದ ಪಲಾಯನ ಗೈದು ತಲೆ ಮರೆಸಿಕೊಂಡಿದ್ದಾರೆ ಎಂದು ತನಿಖಾ ತಂಡ ತಿಳಿಸಿದೆ.