ಮಂಗಳೂರು, ನ.10 (DaijiworldNews/HR): ಏಕಕಾಲದಲ್ಲಿ ರಸ್ತೆ ಬಂದ್, ಟ್ರಾಫಿಕ್ ಕಿರಿಕಿರಿ, ಇದೇನಾ ಸ್ಮಾರ್ಟ್ ಸಿಟಿ ಕಾಮಗಾರಿ ಇದು ತುಘಲಕ್ ದರ್ಬಾರ್ ಕಾಮಗಾರಿ ಎಂದು ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಆರೋಪಿಸಿದ್ದಾರೆ.


ಈ ಕುರಿತು ಸುದ್ದಿಗೋಷ್ಟಿಯಲ್ಲಿ ಬಿಜೆಪಿ ಶಾಸಕರು ಮತ್ತು ಅಧಿಕಾರಿಗಳ ಮೇಲೆ ಕಿಡಿಕಾರಿದ ಅವರು,ಮಂಗಳೂರಿನಲ್ಲಿ ಸುಮಾರು 2 ದಿನದಿಂದ ಸ್ಮಾರ್ಟ್ ಸಿಟಿ ಕಾಮಾಗಾರಿ ನಡೆಯುತ್ತಿದ್ದು ಇದರಿಂದ ಸುಮಾರು ಎರಡು ದಿನ ಟ್ರಾಫಿಕ್ ಸಮಸ್ಯೆ ಹಾಗೂ ಜನರಿಗೆ ದೊಡ್ದ ಮಟ್ಟದಲ್ಲಿ ತೊಂದರೆಯಾಗುತ್ತಿದೆ. ನಿಮ್ಮ ಸ್ಮಾರ್ಟ್ ಸಿಟಿಯಿಂದ ಇಲ್ಲಿ ಜನರಿಗೆ ತೊಂದರೆಯಾಗುತ್ತಿದೆ. ಸ್ಮಾರ್ಟ್ ಸಿಟಿ ಒಳ್ಳೆ ವಿಚಾರ ಆದರೆ ಅದರಿಂದ ಜನರಿಗೆ ತೊಂದರೆ ಆಗಬಾರದು ನಿನ್ನೆ ಎರಡು ಆಂಬುಲೆನ್ಸ್ ಗಳು ಸುಮಾರು ಒಂದು ವರೆ ತಾಸು ಪರದಾಡಿದೆ. ಸ್ಮಾರ್ಟ್ ಸಿಟಿ ಮಾಡುವಂತಹ ಅಧಿಕಾರಿಗಳು ತರಾತುರಿಯಲ್ಲಿ ನಿರ್ಧಾರವನ್ನು ತೆಗೆದುಕೊಂಡದ್ದು, ಅನುಮಾನಕ್ಕೆ ಕಾರಣವಾಗಿದೆ ಯಾರ ಒತ್ತಡ ಬಂದಿದೆ ಅಥವಾ ಶಾಸಕರಿಗೆ ಏನಾದ್ರು ಒತ್ತಡ ಬಂದಿದೆಯ ಎಂಬ ಅನುಮಾನ ಬರುತ್ತಿದೆ. ಹಾಗಾಗಿ ತಕ್ಷಣ ಇದಕ್ಕೆ ಜಿಲ್ಲಾಧಿಕಾರಿಗಳು ಮಧ್ಯಸ್ಥಿತೆ ವಹಿಸಬೇಕು ಸಂಪೂರ್ಣ ವಿವರವನ್ನು ಜಿಲ್ಲಾಧಿಕಾರಿಗಳಿಗೆ ನೀಡಬೇಕು ಮತ್ತು ಅದನ್ನು ಜನರಿಗೂ ತಿಳಿಸಬೇಕು ಇಲ್ಲವಾದಲ್ಲಿ ಮಂಗಳೂರು ಸ್ಥಿತಿ ಕೆಟ್ಟುಹೋಗುತ್ತದೆ ಎಂದು ಹೇಳಿದ್ದಾರೆ.
ಬಳಿಕ ಮಾತಾನಾಡಿದ ಜೆ.ಆರ್ ಲೋಬೊ, ಸ್ಮಾರ್ಟ್ ಸಿಟಿ ಎನ್ನುವಂತಹದು ಸಂಪೂರ್ಣ ವಿಫಲವಾಗಿದ್ದು, ಇದು ಹೀಗೆ ನಡೆದರೆ ಜನರು ಬದುಕಲು ಕಷ್ಟವಾಗುತ್ತದೆ. ಹಾಗಾಗಿ ಆದಷ್ಟು ಬೇಗ ಜನರಿಗೆ ಯಾವ ತೊಂದರೆ ಆಗದಂತೆ ಇದಕ್ಕೆ ಪರಿಹಾರ ಸಿಗಬೇಕಾಗಿದೆ ಎಂದರು.
ಇನ್ನು ಪತ್ರಿಕಾಗೋಷ್ಥಿಯಲ್ಲಿ ನವೀನ್ ಡಿ ಸೋಜ, ಪಾಲಿಕೆಯಲ್ಲಿನ ವಿರೋಧ ಪಕ್ಷದ ನಾಯಕ ಅಬ್ದುಲ್ ರವೂಫ್, ಸದಸ್ಯರಾದ ಶಶಿಧರ ಹೆಗ್ಡೆ, ಎ.ಸಿ.ವಿನಯರಾಜ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.