ಬ್ರಹ್ಮಾವರ, ನ.10 (DaijiworldNews/PY): ದ.ಕ ಸಹಕಾರಿ ಸಕ್ಕರೆ ಕಾರ್ಖಾನೆ ನಿ. ಬ್ರಹ್ಮಾವರ ಇದರ ಅಧ್ಯಕ್ಷರಾಗಿ ಸುಪ್ರಸಾದ್ ಶೆಟ್ಟಿ ಬೈಕಾಡಿ, ಉಪಾಧ್ಯಕ್ಷರಾಗಿ ಉಮಾನಾಥ್ ಶೆಟ್ಟಿ ಶಾನಾಡಿ ಕೆದೂರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಚುನಾವಣಾಧಿಕಾರಿಯಾಗಿ ಕುಂದಾಪುರದ ಸಹಾಯಕ ಆಯುಕ್ತರ ರಾಜು ಅವರು ಭಾಗವಹಿಸಿದ್ದರು. ನಿರ್ದೇಶಕ ಸುಬ್ಬ ಬಿಲ್ಲವ ಹೆಮ್ಮಾಡಿ, ಆಸ್ತಿಕ ಶಾಸ್ತ್ರಿ ಗುಂಡ್ಮಿ ಸಾಸ್ತಾನ, ಕೆ.ಸನ್ಮತ್ ಹೆಗ್ಡೆ ಹಾರ್ದಳ್ಳಿ ಮಂಡಳ್ಳಿ, ಹೇಮಲತಾ ಯು.ಶೆಟ್ಟಿ ಶಾನಾಡಿ ಕೆದೂರು, ವಸಂತಿ ಆರ್.ಶೆಟ್ಟಿ ಕಚ್ಚೂರು ಹೆಬ್ರಿ, ರತ್ನಾಕರ ಬಿ ಗಾಣಿಗ ಬಳ್ಕೂರು, ಸಂತೋಷ ಕುಮಾರ್ ಶೆಟ್ಟಿ ಬಲಾಡಿ, ಗೀತಾ ಶಂಭು ಪೂಜಾರಿ ಉಪಸ್ಥಿತರಿದ್ದರು.
20 ವರ್ಷಗಳ ಬಳಿಕ ಹೊಸ ಆಡಳಿತ ಮಂಡಳಿ ರಚನೆಯಾಗಿದ್ದು, ಕಬ್ಬು ಬೆಳೆಗಾರರಲ್ಲಿ ಹೊಸ ಆಶಾವಾದ ಮೂಡಿಸಿದೆ.