ಕಾಸರಗೋಡು, ನ. 11 (DaijiworldNews/MB) : ಡಿ. 8, 10, 14 ರಂದು ನಡೆಯಲಿರುವ ಸ್ಥಳೀಯಾಡಳಿತ ಸಂಸ್ಥೆ ಚುನಾವಣೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ನಾಳೆ ಆರಂಭಗೊಳ್ಳಲಿದೆ.

ನವೆಂಬರ್ 19 ರವರೆಗೆ ನಾಮಪತ್ರ ಸಲ್ಲಿಸಬಹುದಾಗಿದೆ. 20 ರಂದು ಸೂಕ್ಷ್ಮ ಪರಿಶೀಲನೆ ನಡೆಯಲಿದೆ. 23 ರಂದು ನಾಮಪತ್ರ ಹಿಂತೆಗೆಯಲು ಕೊನೆ ದಿನವಾಗಿದೆ. ಕಾಸರಗೋಡು ಜಿಲ್ಲೆಯಲ್ಲಿ ಡಿ. 14 ರಂದು ಚುನಾವಣೆ ನಡೆಯಲಿದೆ. ಫಲಿತಾಂಶ ಡಿ. 16 ರಂದು ಹೊರ ಬೀಳಲಿದೆ.
ಜಿಲ್ಲಾ, ಬ್ಲಾಕ್, ಗ್ರಾಮ ಪಂಚಾಯತ್, ನಗರಸಭೆ, ನಗರಪಾಲಿಕೆಗೆ ಚುನಾವಣೆ ನಡೆಯಲಿದೆ. ಕಾಸರಗೋಡು ಜಿಲ್ಲೆಯ 38 ಗ್ರಾಮ ಪಂಚಾಯತ್, ಮೂರು ನಗರಸಭೆ, ಆರು ಬ್ಲಾಕ್ ಪಂಚಾಯತ್, ಜಿಲ್ಲಾ ಪಂಚಾಯತ್ಗೆ ಚುನಾವಣೆ ನಡೆಯಲಿದೆ.
2015 ರಲ್ಲಿ ನಡೆದ ಚುನಾವಣೆಯಲ್ಲಿ ಜಿಲ್ಲಾ ಪಂಚಾಯತ್ ಯುಡಿಎಫ್ ಪಡೆದಿತ್ತು. 17 ಸ್ಥಾನಗಳ ಪೈಕಿ ಯುಡಿಎಫ್ 8, ಎಲ್ಡಿಎಫ್ 7 ಮತ್ತು ಬಿಜೆಪಿ 2 ಸ್ಥಾನ ಗಳಿಸಿತ್ತು. 38 ಗ್ರಾಮ ಪಂಚಾಯತ್ಗಳಲ್ಲಿ ಯುಡಿಎಫ್ 19, ಎಲ್ ಡಿಎಫ್ 15 ಮತ್ತು ಬಿಜೆಪಿ 2 ಗ್ರಾಮ ಪಂಚಾಯತ್ಗಳಲ್ಲಿ ಆಡಳಿತ ಕ್ಕೆ ಬಂದಿತ್ತು. ಆರು ಬ್ಲಾಕ್ ಪಂಚಾಯತ್ಗಳಲ್ಲಿ ತಲಾ ಮೂರು ಗ್ರಾಮ ಪಂಚಾಯತ್ಗಳಲ್ಲಿ ಯುಡಿಎಫ್ ಮತ್ತು ಎಲ್ಡಿಎಫ್ ಗೆಲುವು ಸಾಧಿಸಿತ್ತು. ನಗರಸಭೆಗಳಲ್ಲಿ ಎರಡು ಎಲ್ಡಿಎಫ್, ಒಂದು ಯುಡಿಎಫ್ ಪಡೆದುಕೊಂಡಿತ್ತು.