ಮಂಗಳೂರು, ನ.11 (DaijiworldNews/PY): ಕಾರಿನಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಬಂಧಿಸಿದ್ದಾರೆ.

ಬಂಧಿತರನ್ನು ಅನ್ಸಾರಿ ಕ್ರಾಸ್ ರೋಡ್ ನಿವಾಸಿ ಟಿ.ಪಿ ಫಾರೂಕ್ (50 ಹಾಗೂ ಬುಂದರ್ ಹಾಗೂ ನೇಪಾಳ ರಾಜ್ಪುರದ ಮಿಲನ್ ಚೌಕ್-14, ಗೋರಹಿದಾಂಗ್ ನಿವಾಸಿ ಸಾಗರ್ ಸಿಂಗ್ (22) ಎಂದು ಗುರುತಿಸಲಾಗಿದೆ.
ನ.10ರ ಮಂಗಳವಾರದಂದು ಡಿ.ಸಿ.ಐ.ಬಿ ಪೊಲೀಸ್ ನಿರೀಕ್ಷಕ ಚೆಲುವರಾಜು ಬಿ ಅವರಿಗೆ ಬಿಳಿ ಬಣ್ಣದ ಬ್ರೀಝಾ ಕಾರಿನಲ್ಲಿ ಇಬ್ಬರು ವ್ಯಕ್ತಿಗಳು ಬಿ.ಸಿ ರೋಡ್ನಿಂದ ಮಾಣಿ ಮಾರ್ಗದಲ್ಲಿ ಗಿರಾಕಿಗಳಿಗೆ ಗಾಂಜಾ ಸಾಗಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ ಪೊಲೀಸ್ ನಿರೀಕ್ಷಕರು ತಮ್ಮ ಸಿಬ್ಬಂದಿಗಳೊಂದಿಗೆ ಮೆಲ್ಕಾರ್ ಬಸ್ಸು ನಿಲ್ದಾಣದ ಬಳಿ ನಿಂತಿದ್ದ ಕಾರನ್ನು ಕಂಡು ಅದರಲ್ಲಿದ್ದ ಇಬ್ಬರು ವ್ಯಕ್ತಿಗಳನ್ನು ವಿಚಾರಿಸಿದ್ದಾರೆ. ಈ ವೇಳೆ ಇಬ್ಬರು ವ್ಯಕ್ತಿಗಳು ಪಿವಿಸ್ ಸರ್ಕಲ್, ಮಾನಸ ಟವರ್ ಎದುರುಗಡೆ, ಮಂಗಳೂರು ಪಿಜಿಯಲ್ಲಿ ವಾಸ ಎಂಬುದಾಗಿ ತಿಳಿಸಿದ್ದು, ನಾವು ಗಾಂಜಾ ಮಾರಾಟ ಮಾಡಲು ಬಂದಿರುವುದಾಗಿ ಒಪ್ಪಿಕೊಂಡಿದ್ದಾರೆ.
ಈ ವೇಳೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದು, ಆರೋಪಿಗಳಿಂದ ಒಟ್ಟು10,32,900 ರೂ ಮೌಲ್ಯದ 1.480 ಕಿ.ಗ್ರಾಂ ಗಾಂಜಾವನ್ನು ಹಾಗೂ ಮಾರುತಿ ಬ್ರೀಝಾ ಕಾರನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗಳನ್ನು ಹಾಗೂ ಸೊತ್ತುಗಳನ್ನು ಬಂಟ್ವಾಳ ನಗರ ಠಾಣೆಗೆ ಹಸ್ತಾಂತರಿಸಲಾಗಿದೆ.
ಡಿ.ಸಿ.ಐ.ಬಿ ಪೊಲೀಸ್ ನಿರೀಕ್ಷಕಚೆಲುವರಾಜು ಬಿ ಅವರ ನೇತೃತ್ವದಲ್ಲಿ ಡಿ.ಸಿ.ಐ.ಬಿ ಸಿಬ್ಬಂದಿಗಳಾದ ಲಕ್ಷ್ಮಣ ಕೆ.ಜಿ, ಉದಯ ರೈ, ಪ್ರವೀಣ್ ಎಂ, ತಾರಾನಾಥ್, ಪ್ರವೀಣ್ ರೈ, ಶೋನ್ಶಾ, ಸುರೇಶ್ ಹಾಗೂ ತಾಂತ್ರಿಕ ವಿಭಾಗದ ಸಂಪತ್ ಹಾಗೂ ದಿವಾಕರ್ ಕಾರ್ಯಾಚರಣೆ ನಡೆಸಿದ್ದಾರೆ.