ಕಾಸರಗೋಡು, ನ. 12 (DaijiworldNews/MB) : ಫ್ಯಾಶನ್ ಜುವೆಲ್ಲರಿ ವಂಚನೆ ಪ್ರಕರಣದಿಂದ ಮುಕ್ತಗೊಳಿಸುವಂತೆ ಮಂಜೇಶ್ವರ ಶಾಸಕ ಎಂ .ಸಿ ಕಮರುದ್ದೀನ್ ಹೈಕೋರ್ಟ್ಗೆ ಸಲ್ಲಿಸಿರುವ ಅರ್ಜಿಯ ತೀರ್ಫು ಇಂದು ಬೀಳಲಿದೆ.

ಜಾಮೀನು ಕೋರಿ ಹೊಸದುರ್ಗ ನ್ಯಾಯಾಲಯಕ್ಕೆ ಸಲ್ಲಿಸಿರುವ ಅರ್ಜಿಯ ವಿಚಾರಣೆ ಇಂದು ನಡೆಯಲಿದೆ.
ಫ್ಯಾಶನ್ ಗೋಲ್ಡ್ ಇಂಟರ್ ನ್ಯಾಷನಲ್ ಕಂಪೆನಿ ಹೆಸರಿನಲ್ಲಿ ಸುಮಾರು 120 ಕೋಟಿ ರೂ. ಗಳಷ್ಟು ವಂಚನೆ ನಡೆದಿದ್ದು, ಸುಮಾರು 700 ಮಂದಿಯಿಂದ ಠೇವಣಿ ಪಡೆಯಲಾಗಿದೆ. ಈ ಪೈಕಿ 115 ಪ್ರಕರಣಗಳು ಈಗಾಗಲೇ ದಾಖಲಾಗಿದ್ದು, 15ಕೋಟಿ ರೂ. ಗಳ ವಂಚನೆ ನಡೆದಿರುವುದು ಬೆಳಕಿಗೆ ಬಂದಿದೆ. ಚಂದೇರ, ಕಾಸರಗೋಡು, ಪಯ್ಯನ್ನೂರು ಪೊಲೀಸ್ ಠಾಣೆಗಳಲ್ಲಿ ದೂರುಗಳು ದಾಖಲಾಗಿವೆ. ನಾಲ್ಕು ಪ್ರಕರಣಗಳಲ್ಲಿ ಕಮರುದ್ದೀನ್ರನ್ನು ಬಂಧಿಸಲಾಗಿದೆ.