ಕಾಸರಗೋಡು, ನ.12 (DaijiworldNews/HR): ಕೆರೆಗೆ ಬಿದ್ದು ಕೃಷಿಕರೋರ್ವರು ಮೃತಪಟ್ಟ ಘಟನೆ ಮುಳಿಯಾರಿನಲ್ಲಿ ನಡೆದಿದೆ.

ಮುಳಿಯಾರು ಬೇಪು ಅಂಬಲತಿಂಗಳ್ನ ಎಂ.ಕುಞಂಬು ನಾಯರ್(65) ಮೃತಪಟ್ಟವರು.
ತರಕಾರಿ ಕೃಷಿಗೆ ನೀರು ಹಾಯಿಸಲು ತೆರಳಿದ್ದ ಸಂದರ್ಭದಲ್ಲಿ ಆಯ ತಪ್ಪಿ ಕೆರೆಗೆ ಬಿದ್ದು ಮೃತಪಟ್ಟಿದ್ದಾರೆ.
ಪತ್ನಿಯ ಬೊಬ್ಬೆ ಕೇಳಿ ಪರಿಸರವಾಸಿಗಳು ಕುಞಂಬು ನಾಯರ್ರನ್ನು ಮೇಲಕ್ಕೆತ್ತಿ ಆಸ್ಪತ್ರೆಗೆ ತಲಪಿಸುವಷ್ಟರಲ್ಲಿ ಮೃತಪಟ್ಟಿದ್ದರು.
ಇನ್ನು ಈ ಘಟನೆ ಕುರಿತು ಆದೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.