ಉಡುಪಿ,ನ.12 (DaijiworldNews/HR): ಇವತ್ತು ಉತ್ತರ ಕೊಡಬೇಕಾದ್ದು ಕಾಂಗ್ರೆಸ್, ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅದ್ಯಕ್ಷ ಡಿಕೆ ಶಿವಕುಮಾರ್ ಆಖಂಡ ಶ್ರೀನಿವಾಸ್ ಮನೆಗೆ ಅದ ಘಟನೆಯಲ್ಲಿ ಸಂಪತ್ ರಾಜ್ ಮೇಲೆ ದೂರು ಕೊಟ್ಟಿಲ್ಲ. ಪೋಲಿಸ್ ತನಿಖೆಯಲ್ಲಿ ಸಂಪತ್ ರಾಜ್ ನ ಕೈವಾಡಗಳು ಬಹಿರಂಗವಾಗಿದೆ. ಆ ನಂತರ ಸಂಪತ್ ರಾಜ್ ನಾಪತ್ತೆಯಾಗಿದ್ದಾರೆ. ಅನಾರೋಗ್ಯದ ನೆಪ ಹೇಳಿ ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಿ ಅಲ್ಲಿಂದಲೇ ನಾಪತ್ತೆಯಾಗಿದ್ದಾರೆ. ಅವರು ಮನೆಯಲ್ಲೆ ಇರುವುದಾಗಿ ಕಾಂಗ್ರೆಸ್ ಅದ್ಯಕ್ಷರು ಹೇಳಿದ್ದಾರೆ. ಅವರಿಗೆ ನೈತಿಕತೆ ಇದ್ದರೆ, ಸಂಪತ್ ರಾಜ್ ಸರೆಂಡರ್ ಆಗುವಂತೆ ಹೇಳಬೇಕಿತ್ತು. ಆದರೆ ಆತ ಅರೋಪಿ ತಪ್ಪಿತಸ್ಥ ಎಂಬುದಗಿ ಅಲ್ಲ. ಮಜಿ ಮುಖ್ಯ ಮಂತ್ರಿ ಹಾಗೂ ಕಾಮಗ್ರೆಸ್ ಅಧ್ಯಕ್ಷರ ಪ್ರಭಾವ ಇದೆ, ಇದರಲ್ಲಿ ಪೂರ್ತಿಯಾಗಿ ಕಾಂಗ್ರೆಸ್ ಕೈವಾಡ ಇದೆ. ಸಂಪತ್ ರಾಜ್ ಬಂದನವಾಗಲೇ ಬೇಕು, ಅವರನ್ನು ಒಪ್ಪಿಸುವ ಕೆಲಸ ಕಾಂಗ್ರೆಸ್ ಮಾಡಬೇಕು ಎಂದುಒತ್ತಾಯಿಸಿದ್ದಾರೆ.


ಅವರು ಭಾರತಿಯ ಜನತಾ ಪಾರ್ಟಿ ಮಂಗಳೂರು ವಿಭಾಗದಿಂದ ಇಂದು ಆಯೋಜಿಸಿದ ಪ್ರಶಿಕ್ಷಣ ಕಾರ್ಯಗಾರದಲ್ಲಿ ಭಗವಹಿಸಲು ಬಂದ ಸಂದರ್ಭದಲ್ಲಿ ಮಾಧ್ಯಮದವರಿಗೆ ಪ್ರತಿಕಿಯಿಸಿ, ' ಕೇವಲ ರಾಜಕಾರಣಕ್ಕಾಗಿ ಇದನ್ನು ಬೆಂಬಲಿಸುತ್ತಿಲ್ಲ. ಶ್ರೀನಿವಾಸ್ ಅವರು ಬೆಜೆಪಿ ತೆಗೆದುಕೊಳ್ಳುತ್ತಿಲ್ಲ ಆದರೆ ಅಮಾಯಕ,ದಲಿತ ಶಾಸಕನ ಮೇಲೆ ದಾಳಿ ಮಡುತ್ತಿರುವುದು, ಬೆಂಕಿ ಹಾಕುವುದು ರಾಜಕೀಯದಲ್ಲಿ ಸರಿಯಲ್ಲ. ಹಾಗೆದ್ದರೆ ಸಾಮನ್ಯ ಜನರ ಬದುಕೇನು? ಎಮದು ಪ್ರಶ್ನಿಸಿದರು. ಹಾಗಾಗಿ ಇದರಿಂದ ಶ್ರೀನಿವಾಸ್ ಅವರಿಗೆ ಅನ್ಯಾಯ ಆಗಿದೆ, ಬಿಜೆಪಿ ನ್ಯಾಯ ಕೊಡಿಸುವ ಕೆಲಸ ಮಾಡುತ್ತದೆ.
ಉಪಚುನಾವಣೆಯಲ್ಲಿ ಬೆಜೆಪಿ ಗೆಲುವಿನ ಬಗ್ಗೆ ಮಾತನಾಡುತ್ತಾ, 'ಇದು ಬಹಿರಂಗ ಆಗಿರುವ ವಿಷಯ. ನಮ್ಮ ಕಾರ್ಯ, ತಂತ್ರಗಾರಿಕೆ, ಸಂಘಟನೆ ಒಂದು ಬದಿ. ವ್ಯವಸ್ಥಿತ ಚುನಾವಣೆ ಎದುರಿಸಿದ್ದೇವೆ. ಶಿರಾದಲ್ಲಿ ಸಿದ್ದರಾಮಯ್ಯ ಮತ್ತು ಆರ್ ಆರ್ ನಗರದಲ್ಲಿ ಡಿ ಕೆ ಶಿವಕುಮಾರ್ ತಮ್ಮ ವೈಯಕ್ತಿಕ ಕಣ ಎಂದು ಭವಿಸಿದರು. ಕ್ಯಾಂಡಿಡೇಟ್ ಹೆಸರೇ ಹೇಳಿಲ್ಲ. ಬದಲಾಗಿ ಮುಂದಿನ ಚುನಾವಣೆಗೆ ಚೇರ್ಗೆ ಟವೆಲ್ ಹಾಕುವ ಕೆಲಸ ಈಗಲೇ ಮಾಡಿದ್ದಾರೆ. ಅವರ ಒಳ ಸಂಚಿನಿಂದ ಬೆಜೆಪಿಗೆ ಲಾಭವಾಗಿದೆ.
ಸಂಪುಟ ವಿಸ್ತರಣೆ ಮುಖ್ಯಮಂತ್ರಿಯವರ ವಿವೇಚನೆಗೆ ಬಿಟ್ಟುದ್ದು. ಅವರೇ ಎಲ್ಲಾ ತೀರ್ಮಾನ ತೆಗೆದು ಕೊಳ್ಳುತ್ತಾರೆ. ಅವರು ಅನುಭವಿಗಳು ಎಲ್ಲವನ್ನು ಗಮನಿಸುತ್ತಾರೆ. ಸಮಚಿತ್ತ, ಸಮಭಾವದಿಂದ ರಾಜ್ಯದ ಹಿತದೃಷ್ಟಿಯಿಂದ ನಿರ್ಧಾರ ತಗೆದುಕೊಳ್ಳುತ್ತಾರೆ.
ಯತ್ನಾಳ್ರು ಪಕ್ಷದ ವಿರೋದಿ ಕೆಲಸ ಮಾಡಿದ್ದ ಬಗ್ಗೆ ನಳಿನ್ ಪ್ರತಿಕ್ರಿಯಿಸಿ, ಪಕ್ಷದ ಅಥವಾ ಪಕ್ಷ ತತ್ವ ವಿರೋಧಿ ಕೆಲಸ ಯಾರೇ ಮಾಡಿದರು ಅವರ ಮೇಲೆ ಕ್ರಮ ತೆಗೆದುಕೊಳ್ಳುತ್ತೇವೆ. ಅದಕ್ಕೆ ಏನು ಮಾಡಬೇಕೋ ಅದನ್ನ ಮಾಡುತ್ತೇವೆ ಎಂದರು.