ಕುಂದಾಪುರ, ನ.12 (DaijiworldNews/HR): ಕಂದಾಯ ಇಲಾಖೆಯ ರಾಜಸ್ವ ನಿರೀಕ್ಷಕರ ಕಚೇರಿಗೆ ದಾಳಿ ನಡೆಸಿದ ಉಡುಪಿ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ವ್ಯಕ್ತಿಯೊಬ್ಬರಿಂದ 5,000 ರೂ. ಸ್ವೀಕರಿಸುತ್ತಿದ್ದ ಪ್ರಭಾರ ಕಂದಾಯ ನಿರೀಕ್ಷಕ ಭರತ್ ಶೆಟ್ಟಿ ಎನ್ನುವವರನ್ನು ನಗದು ಸಹಿತ ವಶಕ್ಕೆ ಪಡೆದುಕೊಂಡಿದ್ದಾರೆ.





ಭೂ ಪರಿವರ್ತನೆಗಾಗಿ ವ್ಯಕ್ತಿಯೊಬ್ಬರಿಂದ 12,000 ರೂ. ಬೇಡಿಕೆ ಇಟ್ಟಿದ್ದ ಅವರಿಗೆ ಈ ಬಾಬ್ತು 5,000 ನೀಡುವ ವೇಳೆ ಎಸಿಬಿ ತಂಡ ದಾಳಿ ನಡೆಸಿದೆ.
ಎಸಿಬಿ ಡಿವೈಎಸ್ಪಿ ಮಂಜುನಾಥ ಕವರಿ ಅವರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ನಿರೀಕ್ಷಕರಾದ ಸತೀಶಕುಮಾರ, ಚಂದ್ರಕಲಾ, ಸಿಬ್ಬಂದಿಗಳಾದ ಪ್ರಸನ್ನ, ರವೀಂದ್ರ, ಅಬ್ದುಲ್ ಜಲಾಲ್, ರಾಘವೇಂದ್ರ ಹೋಸ್ಕೋಟೆ, ಸೂರಜ್, ಅಬ್ದುಲ್ ಲತೀಫ್ ಹಾಗೂ ಪ್ರತಿಮಾ ಇದ್ದರು.