ಕಾರ್ಕಳ, ನ.12 (DaijiworldNews/HR): ದೀಪಾವಳಿಯ ಗೂಡುದೀಪದ ಮೂಲಕ ಕೋವಿಡ್-19 ಜಾಗೃತಿ ಮೂಡಿಸುವಲ್ಲಿ ಪುರಸಭಾ ಸದಸ್ಯ ಸುಭದ ರಾವ್ ಮುಂದಾಗಿದ್ದಾರೆ.


ದೀಪಾವಳಿಯ ಪ್ರಯುಕ್ತ ತಯಾರಿಸಿರುವ ಗೂಡುದೀಪವು ಹೊರಮೆಲ್ಮೇಯಲ್ಲಿ ಸಂಪೂರ್ಣ ಪರಿಸರ ಸ್ನೇಹಿಯಾಗಿ ಬಿಂಬಿಸುವ ಚಿತ್ರಗಳ ಜೊತೆಗೆ ಘೋಷ ವಾಕ್ಯ ಕಂಡುಬರುತ್ತದೆ.
ಮಾಸ್ಕ್ ಧರಿಸಿ, ಸೆನಿಟೈಸರ್ ಬಳಸಿ, ಹ್ಯಾಂಡ್ ವಾಶ್ಮಾಡಿ, ಸಾಮಾಜಿಕ ಅಂತರ ಕಾಪಾಡಿ, ಎಂಬ ಚಿತ್ರದೊಂದಿಗೆ ಸಂದೇಶಗಳನ್ನು ಅದರಲ್ಲಿ ಬರೆಯಲಾಗಿರುವುದು ಈ ವರ್ಷದ ವಿಶೇಷವಾಗಿದೆ.