ಉಡುಪಿ, ನ. 12 (DaijiworldNews/MB) : ಸಂಪೂರ್ಣ ಹದೆಗೆಟ್ಟಿರುವ ಪರ್ಕಳ ಮಣಿಪಾಲ ರಾಷ್ಟ್ರೀಯ ಹೆದ್ದಾರಿಯನ್ನು ತಕ್ಷಣವೇ ಸರಿಪಡಿಸುವಂತೆ ಉಡುಪಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಇಂದು ಬೃಹತ್ ಪ್ರತಿಭಟನೆ ನಡೆಯಿತು.

















ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಕುಂದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ್ಯರಾದ ವಿಕಾಸ್ ಹೆಗ್ಡೆಯವರು "ನಗರಸಭೆಯಿಂದ ಹಿಡಿದು ಕೆಂದ್ರದವರೆಗೆ ಬಿಜೆಪಿ ಸರಕಾರ ಇದೆ, ನೈತಿಕತೆ ಇದ್ದಲ್ಲಿ ಈ ವಿಚಾರದಲ್ಲಿ ರಾಜಕೀಯ ಮಾಡುವುದನ್ನು ಬಿಟ್ಟು ಕೂಡಲೇ ಇಲ್ಲಿನ ಭೂ ಸಂತ್ರಸ್ತರಿಗೆ ಸೂಕ್ತ ಪರಿಹಾರ ನೀಡಿ ಕಾಮಗಾರಿಯನ್ನು ಶ್ರೀಘ್ರದಲ್ಲಿ ಮುಗಿಸಬೇಕು. ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರಕಾರದ ಅವಧಿಯಲ್ಲಿ ಸಂಸತ್ರಸ್ತರಿಗೆ ಪರಿಹಾದರ ಮೊತ್ತವನ್ನು ನಾಲ್ಕು ಪಟ್ಟು ಹೆಚ್ಚಿಸಲಾಯಿತು. ಇಂದು ಭಾರತ ದೇಶ ಪ್ರಗತಿ ಪತದತ್ತ ಇದೆ ಎಂದಾದಲ್ಲಿ ಅದಕ್ಕೆ ಕಳೆದ 50 ವರ್ಷಗಳ ಕಾಂಗ್ರೆಸ್ ಆಢಳಿತವೇ ಕಾರಣ. ಬಿಜೆಪಿಗೆ ಯಾವುದೇ ಸಮಸ್ಯೆಗಳು ಪರಿಹಾರ ಕಾಣದೇ ನಿರಂತರವಾಗಿ ಇರಬೇಕು. ರಘುಪತಿ ಭಟ್ರವರು ಜನಪರ ಕೆಲಸಗಳನ್ನು ಮಾಡುತಿಲ್ಲ. ಯಾರೋ ಕಂಟ್ರಾಕ್ಟರ್ಗಳು ತಂದ ಕಾಮಗಾರಿಗೆ ಶಾಸಕರು ಬಂದು ಗುದ್ದಲಿ ಪೂಜೆ ಮಾಡುತ್ತಾರೆ. ಅದರ ಬದಲಾಗಿ ಜನಪರ ಕೆಲಸಗಳನ್ನು ಮಾಡಿ'' ಎಂದು ಹೇಳಿದರು.
"ಶೋಭಾ ಕರಂದ್ಲಾಜೆ ಧರ್ಮ, ಜಾತಿಯ ನಡುವೆ ವಿಷಬೀಜ ಬಿತ್ತುವ ಕೆಲಸ ಮಾಡುತಿದ್ದಾರೆ. ಉತ್ತರಕನ್ನಡ, ಉಡುಪಿ ಮಂಗಳೂರಿನಲ್ಲಿ ಬಿಜೆಪಿ ಸಂಸದರು ಇದ್ದಾರೆ ಈ ಜಿಲ್ಲೆಗಳಿಗೆ ಮಾರಕಾವಗಿರುವ ಸಿಆರ್ಝಡ್ ಸಮಸ್ಯೆ, ಕಸ್ತೂರಿ ರಂಗನ್ ವರದಿ ಅನುಷ್ಟಾನ, ಡೀಮ್ಡ್ ಫಾರೆಸ್ಟ್ ಹೆಸರಿನಲ್ಲಿ ನಡೆಯುತ್ತಿರುವ ದೌರ್ಜನ್ಯವನ್ನು ತಡೆಗಟ್ಟುವ ಪ್ರಯತ್ನ ಮಾಡಿ. ಕಾಂಗ್ರೆಸ್ ಜನಪಪ್ರತಿನಿಧಿಗಳು ಈ ಸಮಸ್ಯೆಗಳ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ. ಕಳ್ಳನ ತರಹ ಮೋದಿ ಮತ್ತು ಸಹಚರರು ದೇಶವನ್ನು ಕೊಳ್ಳೆ ಹೊಡೆಯುತಿದ್ದಾರೆ" ಎಂದು ದೂರಿದರು.
ಪ್ರತಿಭನಟಯನ್ನು ಉದ್ದೇಶಿಸಿ ಮಾತನಾಡಿ ಮಾಜಿ ಶಾಸಕ ಪ್ರಮೋದ್ ಮಧ್ವರಾಜ್, "ಇಂದು ಇಲ್ಲಿನ 900 ಮೀಟರ್ ಪ್ರದೇಶದಲ್ಲಿ ಭೂಮಿ ಕಳೆದುಕೊಳ್ಳುವ ಸಂತ್ರಸ್ತರಿಗೆ 12 ಕೊಟಿ ಪರಿಹಾರ ನೀಡಬೇಕು ಎಂದು ಕಾಂಗ್ರೆಸ್ ಆಗ್ರಹಿಸುತ್ತದೆ. 3ಎ ನೋಟಿಫಿಕೆಶನ್ ಆಗಿತ್ತು. ಆದರೆ ಕೇವಲ ಒಂದು ವರ್ಷದ ಒಳಗೆ 3ಬಿ ನೋಟಿಫೀಕೇಶನ್ ಮಾಡಬೇಕಿತ್ತು. ಆದರೆ ಈ ಜಿಲ್ಲಾಡಳಿತ ಮತ್ತು ಬಿಜೆಪಿ ಆಡಳಿತ ಅದನ್ನು ಮಾಡದೇ ನೋಟಿಫಿಕೇಶನ್ ರದ್ದಾಗಿದೆ. ಇದೀಗ ಮತ್ತೆ 3ಎ ನೊಟಿಫೀಕೇಶನ್ ಮಾಡಬೇಕಾಗಿ ಬಂದಿದೆ. ನಗರಸಭೆಯಿಂದ ಸಿಗಬೇಕಾದ 3 ಕೋಟಿ ಪರಿಹಾರಕ್ಕೆ ನಾನು ತಡೆ ಹಾಕಿದೆ ಎಂದು ನನ್ನ ವಿರುದ್ದ ಆರೋಪ ಮಾಡಿದರು. ನಾನು ಸಂಸತ್ರಸ್ತರಿಗೆ ಇನ್ನೂ ಹೆಚ್ಚಿನ ಪರಿಹಾರ ಕೇಂದ್ರದಿಂದ ಸಿಗಬೇಕು ಎಂಬ ಉದ್ದೇಶದಿಂದ ನಗರಸಭೇಯ 3 ಕೊಟಿ ಪರಿಹಾರ ನೀಡುವುದು ಬೇಡ ಎಂದಿದ್ದೇ. ರಾಷ್ಟ್ರೀಯ ಹೆದ್ದಾರಿಗೆ ಪರಿಹಾರ ನೀಡಬೇಕಿರುವುದು ಕೇಂದ್ರ ಸರಕಾರ ನಗರಸಭೆ ಅಲ್ಲ. ನಾನು ಅಧಿಕಾರದಲ್ಲಿ ಇದ್ದಾಗ ತಿಂಗಳಿಗೆ ಒಮ್ಮೆ ಸಭೆ ಮಾಡಿ ವಿಷಯ ಕೇಳುತ್ತಿದ್ದೇ ಆದರೆ ಈಗ ಉಡುಪಿಯಲ್ಲಿ ಅಧಿಕಾರಿಗಳಿಗೆ ಕೇಳುವವರು ಇಲ್ಲದಾಗಿದೆ. ಕೆಂದ್ರ ಸರಕಾರ ದುಡ್ಡು ಕೊಟ್ಟಿದೆ ಆದರೆ ಇವರ ಬೇಜವಬ್ದಾರಿತನದಿಂದ ವಿಳಂಬ ಆಗಿದೆ. ಮುಂದಿನ ಒಂದು ತಿಂಗಳ ಒಳಗೆ 3ಬಿ ಮತ್ತು 3ಜೆ ನೋಟಿಫೀಕೇಶನ್ ಮಾಡಿ ಮುಂದಿನ 6 ತಿಂಗಳ ಒಳಗೆ ಕಾಮಗಾರಿ ಮುಗಿಸಬೇಕು. ಮಲ್ಪೆ, ಪರ್ಕಳ, ಮೊಳಕಾಲ್ಮೂರು ರಸ್ತೆ ಆಗುವಲ್ಲಿ ನನ್ನ ಮತ್ತು ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್ ಅವರ ಕೊಡುಗೆ ದೊಡ್ಡದಿದೆ" ಎಂದರು.
ಪ್ರತಿಭಟನಾ ಸಭೆಯಲ್ಲಿ ಶಾಸಕ, ಸಂಸದರು ಮತ್ತು ಜನಪ್ರತಿನಿಧಿಗಳ ವಿರುದ್ದ ಪ್ರತಿಭಟನಾಕಾರರು ಘೋಷಣೆಗಳನ್ನು ಕೂಗಿದರು. ಈ ಸಂಧರ್ಭದಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಬಿ. ನರಸಿಂಹ ಮೂರ್ತಿ, ನಗರಸಭೆ ಸದಸ್ಯ ರಮೇಶ್ ಕಾಂಚನ್, ಮುಖಂಡರಾದ ಹರೀಶ್ ಕಿಣಿ, ಸತೀಶ್ ಅಮೀನ್ ಪಡುಕರೆ, ಕೆ. ಕೃಷ್ಣಮೂರ್ತಿ ಆಚಾರ್ಯ, ಜನಾರ್ದನ್ ಭಂಡಾರ್ಕರ್, ಪ್ರಖ್ಯಾತ್ ಶೆಟ್ಟಿ, ಯತೀಶ್ ಕರ್ಕೆರಾ, ವೆರೆನಿಕಾ ಕರ್ನೇಲಿಯೋ, ಗೀತಾ ವಾಗ್ಲೆ, ಡಾ. ಸುನೀತಾ ಶೆಟ್ಟಿ, ಜ್ಯೋತಿ ಹೆಬ್ಬಾರ್, ಯುವರಾಜ್, ಕೀರ್ತಿ ಶೆಟ್ಟಿ, ಸುಕೇಶ್ ಕುಂದರ್, ಗಣೇಶ್ ನೆರ್ಗಿ, ದಿವಾಕರ್ ಕುಂದರ್, ದಿನೇಶ್ ಪುತ್ರನ್, ಕುಶಾಲ ಶೆಟ್ಟಿ ಇಂದ್ರಾಳಿ, ಆರ್.ಎಲ್. ಡಯಾಸ್, ಸೌರಭ ಬಲ್ಲಾಳ್, ಶರಣ್, ಗಣೇಶ್ ರಾಜ್ ಸರಳೇಬೆಟ್ಟು ಉಪಸ್ಥಿತರಿದ್ದರು.