ಕಾಸರಗೋಡು,ನ.12 (DaijiworldNews/HR): ಜಿಲ್ಲೆಯಲ್ಲಿ ಇಂದು 108 ಮಂದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ.

108ಜನರ ಪೈಕಿ 99 ಮಂದಿಗೆ ಸಂಪರ್ಕದಿಂದ ಸೋಂಕು ತಗಲಿದ್ದು, ಹೊರರಾಜ್ಯಗಳಿಂದ ಬಂದ 6, ವಿದೇಶಗಳಿಂದ ಬಂದ ಮೂವರಲ್ಲಿ ಸೋಂಕು ಪತ್ತೆಯಾಗಿದೆ.
ಇನ್ನು 38 ಮಂದಿ ಗುಣಮುಖರಾಗಿದ್ದು, ಇಬ್ಬರು ಆರೋಗ್ಯ ಕಾರ್ಯಕರ್ತರಿಗೆ ಸೋಂಕು ದೃಢಪಟ್ಟಿದೆ.
ಇದುವರೆಗೆ 20120 ಮಂದಿಗೆ ಸೋಂಕು ತಗಲಿದೆ. 1449 ಮಂದಿ ಸದ್ಯ ಚಿಕಿತ್ಸೆ ಪಡೆಯುತ್ತಿದ್ದಾರೆ.