ಉಡುಪಿ, ನ. 13 (DaijiworldNews/MB) : ರಾಜ್ಯ ಸರಕಾರವು ಹಸಿರು ದೀಪಾವಳಿಯನ್ನು ಆಚರಿಸುವಂತೆ, ಪರಿಸರ ಸ್ನೇಹಿ ವಸ್ತುಗಳನ್ನು ಬಳಸುವಂತೆ ಕರೆ ಕೊಟ್ಟಿದೆ. ಹಾಗಾಗಿ ಈ ಬಾರಿಯ ದೀಪಾವಳಿಯು ಜನರ ಮನೆಯನ್ನು ಮಾತ್ರವಲ್ಲ ರಾಷ್ಟ್ರದ ಸ್ವದೇಶಿ ಕಲ್ಪನೆ ಬೆಳಗಲಿ ಎಂಬ ಉದ್ದೇಶದಿಂದ ಉಡುಪಿ ಸಾರ್ವಜನಿಕ ಗಣೇಶೋತ್ಸವ ಸಮಿತಿ ಕಡಿಯಾಳಿ ''ಗೋಮಯ ಜ್ಯೋತಿ'' ಎಂಬ ಸಾವಯವ ದೀಪದ ಯೋಜನೆಯನ್ನು ಜಾರಿಗೆ ತಂದಿದೆ.




ಪುಣ್ಯಕೋಟಿ ಗೋಸೇವಾ ಟ್ರಸ್ಟ್ ಆರೂರು ಮತ್ತು ಜಾರ್ಖಂಡಿನ ಟೀಮ್ ಗೌಮಾದಿಂದ 75 ಶೇಕಡಾ ಗೋಮಯ 25 ಶೇಕಡ ಮಣ್ಣು ಮಿಶ್ರಿತ ದೀಪವನ್ನು ತಯಾರು ಮಾಡಲಾಗುತ್ತಿದೆ.
ಈ ದೀಪದ ವಿಶೇಷತೆ ಏನೆಂದರೆ ದೀಪವು ನೀರಿನಲ್ಲಿ ತೇಲುತ್ತದೆ. ತದನಂತರ ಇದನ್ನು ಗಿಡ-ಮರಗಳಿಗೆ ಗೊಬ್ಬರವಾಗಿಯೂ ಬಳಸಬಹುದು. ಈ ದೀಪವನ್ನು ವ್ಯವಹಾರದ ದೃಷ್ಟಿಯಿಂದ ಮಾಡುತ್ತಿಲ್ಲ. ಬದಲಾಗಿ ಗೋಸೇವಾ ದೃಷ್ಟಿ ಮತ್ತು ಸ್ವದೇಶಿ ಕಲ್ಪನೆಯ ಅಂಗವಾಗಿ ಪರಿಸರ ಪೂರಕ ನಡೆಸಲಾಗುತ್ತಿದೆ. ಒಂದು ಪ್ಯಾಕೆಟ್ ಬೆಲೆ 50.00 (ಐವತ್ತು ರೂಪಾಯಿ) ಇದರಲ್ಲಿ 12 ದೀಪವು ಇರಲಿದೆ ಎಂದು ಗಣೇಶೋತ್ಸವ ಸಮಿತಿ ಕಡಿಯಾಳಿ ಇದರ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಕಿಣಿಯವರು ತಿಳಿಸಿದ್ದಾರೆ
ಈ ದೀಪವು ನಗರದ ಸುತ್ತಮುತ್ತಲಿನ ಅಂಗಡಿಗಳಲ್ಲಿ ಲಭ್ಯವಿದೆ. ಅಲ್ಲದೆ ಕಡಿಯಾಳಿಯ ಸಾರ್ವಜನಿಕ ಗಣೇಶೋತ್ಸವ ಸಮಿತಿಯನ್ನು ಸಂಪರ್ಕಿಸಬಹುದಾಗಿದೆ.