ಶ್ರೀನಗರ, ಜೂ03: ಪಾಕಿಸ್ತಾನ ಮತ್ತೆ ಕದನ ವಿರಾಮ ಒಪ್ಪಂದವನ್ನು ಉಲ್ಲಂಘಿಸಿದ್ದು, ಅಂತಾರಾಷ್ಟ್ರೀಯ ಗಡಿಯಲ್ಲಿ ಇಬ್ಬರು ಭಾರತೀಯ ಯೋಧರನ್ನು ಹತ್ಯೆ ಮಾಡಿದೆ.
ಬಿಎಸ್ಎಫ್ ಪೇದೆಗಳಾದ ವಿಜಯ್ ಕುಮಾರ್ ಮತ್ತು ಎಎಸ್ಐ ನಾರಾಯಣ್ ಯಾದವ್ ಪಾಕಿಸ್ತಾನದ ಗುಂಡಿದ ಬಲಿಯಾದ ಯೋಧರು. ಜಮ್ಮು ಮತ್ತು ಕಾಶ್ಮೀರದ ಅಕ್ನೂರ್ ಪ್ರಾಂತ್ಯದಲ್ಲಿ ಈ ಘಟನೆ ನಡೆದಿದೆ.
ಭಾರತ ಹಾಗೂ ಪಾಕಿಸ್ತಾನದ ಸೈನ್ಯ ಕಾರ್ಯಾಚರಣೆ ಮಹಾ ನಿರ್ದೇಶಕರು ವಿಶೇಷ ಒಪ್ಪಂದಕ್ಕೆ ಸಹಿ ಮಾಡಿದ್ದು, ಗಡಿ ಭಾಗದ ಪರಿಸ್ಥಿತಿಯನ್ನು ಸುಧಾರಿಸಲು ಮುಂದಾಗಿದ್ದರು. ಮಾತ್ರವಲ್ಲ, ಜಮ್ಮು ಮತ್ತು ಕಾಶ್ಮೀರದ ಗಡಿ ಭಾಗದಲ್ಲಿರುವ ಜನರು ಶಾಂತಿಯಿಂದಿರಲು ಮಾಡಲು ಉಭಯ ದೇಶಗಳು ಪರಸ್ಪರ ಒಪ್ಪಂದ ಮಾಡಿಕೊಂಡಿದ್ದವು. ಇದೀಗ ಎರಡು ದಿನಗಳಲ್ಲಿಯೇ ಪಾಕಿಸ್ತಾನ ಮತ್ತೆ ದುಷ್ಟ ಬುದ್ದಿಯನ್ನು ಮುಂದುವರೆಸಿದೆ.
ಕೆಲವೇ ಗಂಟೆಗಳ ಅವಧಿಯಲ್ಲಿ ಮೂರು ಗ್ರೆನೇಡ್ ದಾಳಿ ನಡೆಸಿದ್ದು, ಕೊಟ್ಟ ಮಾತಿಗೆ ಪಾಕಿಸ್ತಾನ ತಪ್ಪಿ ನಡೆದಿದೆ.