ಉಡುಪಿ, ನ.13 (DaijiworldNews/HR): ಬಸ್ರೂರು ರಾಜೀವ ಶೆಟ್ಟಿಯವರಿಂದ ತೆರವುಗೊಂಡ ಸಭಾಪತಿ ಸ್ಥಾನಕ್ಕೆ ಜಿಲ್ಲಾಧಿಕಾರಿಯವರ ಅಧ್ಯಕ್ಷತೆಯಲ್ಲಿ ಗುರುವಾರ ಆಯ್ಕೆ ಪ್ರಕ್ರಿಯೆ ನಡೆಸಲಾಗಿ ನೂತನ ಸಭಾಪತಿಯಾಗಿ ಡಾ. ತಲ್ಲೂರು ಶಿವರಾಮ ಶೆಟ್ಟಿಯವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.

ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಉಡುಪಿ ಜಿಲ್ಲಾ ಘಟಕದ ಆಡಳಿತ ಮಂಡಳಿಯ ಆರು ಮಂದಿ ಸದಸ್ಯರು ಸಂಸ್ಥೆಯ ಸಭಾಪತಿಯಾದ ಬಸ್ರೂರು ರಾಜೀವ್ ಶೆಟ್ಟಿ, ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ, ಖಜಾಂಚಿ ಟಿ. ಚಂದ್ರಶೇಖರ್ ರವರ ಮೇಲಿನ ಅವಿಶ್ವಾಸ ಗೊತ್ತುವಳಿ ನಡೆಸುವಂತೆ ಸಂಸ್ಥೆಯ ಅಧ್ಯಕ್ಷರಾದ ಮಾನ್ಯ ಜಿಲ್ಲಾಧಿಕಾರಿಯವರಿಗೆ ಮನವಿ ನೀಡಿದ್ದು, ಅದರಂತೆ ಅವಿಶ್ವಾಸ ಗೊತ್ತುವಳಿ ಸಭೆಯು ಕ್ಕೆ ಅಧ್ಯಕ್ಷರು ಹಾಗೂ ಜಿಲ್ಲಾಧಿಕಾರಿಯವರಾದ ಜಿ.ಜಗದೀಶ್, ಭಾ.ಆ.ಸೇ. ರವರ ಅಧ್ಯಕ್ಷತೆಯಲ್ಲಿ ರೆಡ್ ಕ್ರಾಸ್ ಭವನದ ಜೀನ್ ಹೆನ್ರಿ ಡ್ಯುನಾಂಟ್ ಹಾಲ್ನಲ್ಲಿ ಜರುಗಿತು.
ಅವಿಶ್ವಾಸ ಗೊತ್ತುವಳಿಯ ಸಂದರ್ಭದಲ್ಲಿ ಸಂಸ್ಥೆಯ ಉಪಾಧ್ಯಕ್ಷರಾದ ಜಿಲ್ಲಾ ಪಂಚಾಯತ್ನ ಮಾನ್ಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ. ನವೀನ್ ಭಟ್ ಬಾ.ಆ.ಸೇ ಯವರು ಉಪಸ್ಥಿತರಿದ್ದರು.
ಡಾ ಶಿವರಾಂ ತಲ್ಲೂರ್ ಉಡುಪಿಯ ಪ್ರಸಿದ್ಧ ಉದ್ಯಮಿ, ಸ್ವತಃ ಯಕ್ಷಗಾನ ಕಲಾವಿದ, ಕಲಾ ಪೋಷಕ , ಮೂರು ಬಾರಿ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ಮುಡಿಗೇರಿಸಿ ಕೊಂಡವರು. ಕಲಾ ರಂಗಭೂಮಿ ಅಧ್ಯಕ್ಷರಾಗಿ, ಯಕ್ಷಗಾನ ಕಲಾರಂಗ ಸಂಸ್ಥೆ ಯಲ್ಲಿ ಹತ್ತುವರ್ಷ ಸೇವೆ ಸಲ್ಲಿಸಿದ್ದಾರೆ . ಅಲ್ಲದೆ ತಲ್ಲೂರು ಫ್ಯಾಮಿಲಿ ಟ್ರಸ್ಟ್ ನಡಿಯಲ್ಲಿ ವಿದ್ಯಾರ್ಥಿಗಳಲ್ಲಿ ನೈತಿಕ ಬಲ ತುಂಬಿಸಿದ್ದಾರೆ.