ವಿಟ್ಲ, ನ. 13 (DaijiworldNews/SM): ವ್ಯಕ್ತಿಯೊಬ್ಬ ಮಾನಸಿಕವಾಗಿ ನೊಂದು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕರೋಪಾಡಿ ಗ್ರಾಮದ ಕುರೋಮೂಲೆ ಎಂಬಲ್ಲಿ ನಡೆದಿದೆ.

ಕರೋಪಾಡಿ ಗ್ರಾಮದ ಕುರೋಮೂಲೆ ನಿವಾಸಿ ಸತೀಶ್(39) ಮೃತಪಟ್ಟ ದುರ್ದೈವಿ. ಸತೀಶ್ ಅವರು ಒಂದು ವರ್ಷದಿಂದ ವಿಪರೀತ ಕುಡಿತದ ಚಟವನ್ನು ಹೊಂದಿದ್ದರು. ಕುಡಿತದ ಚಟ ಹೆಚ್ಚಾಗಿ ಮಾನಸಿಕವಾಗಿ ನೊಂದುಕೊಂಡಿದ್ದರು. ಇದೇ ಕಾರಣದಿಂದಾಗಿ ಈ ಹಿಂದೆ ಮೂರು ಬಾರಿ ಅವರು ಆತ್ಮಹತ್ಯೆಗೆ ಯತ್ನಿಸಿದ್ದರು ಎಂದು ತಿಳಿದುಬಂದಿದೆ.
ಸತೀಶ್ ನ ಪತ್ನಿ ಕೂಲಿ ಕೆಲಸಕ್ಕೆ ತೆರಳುತ್ತಿದ್ದು, ಸತೀಶ್ ಅವರು ತನ್ನ ಸಂಬಂಧಿಕರ ಅಡ್ಯನಡ್ಕದಲ್ಲಿರುವ ಮನೆಗೆ ತಿಥಿ ಕಾರ್ಯಕ್ರಮಕ್ಕೆ ತನ್ನ ತಂದೆಯನ್ನು ಆಟೋ ರಿಕ್ಷಾದಲ್ಲಿ ಕರೆದೊಯ್ದು ಬಿಟ್ಟು ತನ್ನ ಮನೆಗೆ ಬಂದಿದ್ದರು. ಸತೀಶ್ ಅವರ ತಂದೆ ಕಾರ್ಯಕ್ರಮ ಮುಗಿಸಿ ಮನೆಗೆ ಬಂದು ನೋಡಿದಾಗ ಗೇರು ಮರದಲ್ಲಿ ನೇಣು ಹಾಕಿದ ಸ್ಥಿತಿಯಲ್ಲಿ ಸತೀಶನ ಮೃತದೇಹ ಪತ್ತೆಯಾಗಿದೆ.
ಮಾನಸಿಕವಾಗಿ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ತಿಳಿದು ಬಂದಿದೆ. ಸ್ಥಳಕ್ಕೆ ವಿಟ್ಲ ಪೊಲೀಸರು ಭೇಟಿ ನೀಡಿ, ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.