ಮಂಗಳೂರು, ನ. 14 (DaijiworldNews/MB) : ಅಸಭ್ಯ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹರಿಯಬಿಡುವುದಾಗಿ ಯುವತಿಯೊಬ್ಬಳು ವ್ಯಕ್ತಿಯೊಬ್ಬರಿಗೆ ಬೆದರಿಸಿದ್ದಾರೆ ಆರೋಪಿಸಿ ಕದ್ರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

ನಗರದ ಶರಬತ್ ಕಟ್ಟೆ ನಿವಾಸಿಯೋರ್ವ ಕಳೆದ ಆಗಸ್ಟ್ನಲ್ಲಿ ಫೇಸ್ಬುಕ್ನಲ್ಲಿ ಯುವತಿಯೊಂದಿಗೆ ಪರಿಚಯ ಮಾಡಿಕೊಂಡಿದ್ದ. ನಂತರ ಯುವತಿ ಅಶ್ಲೀಲ ಫೋಟೋಗಳನ್ನು ಫೇಸ್ಬುಕ್ ಮೆಸೆಂಜರ್ ಮೂಲಕ ಕಳುಹಿಸಿ ಆ ವ್ಯಕ್ತಿಯಲ್ಲಿ ಹಣ ನೀಡುವಂತೆ ಬೇಡಿಕೆ ಇಟ್ಟಿದ್ದಳು. ಹಾಗೆಯೇ ಅಶ್ಲೀಲ ಫೋಟೋಗಳನ್ನು ಸಹ ಕಳುಹಿಸುವಂತೆ ಒತ್ತಾಯಿಸಿದಳು. ಈ ವ್ಯಕ್ತಿಯು ಫೋಟೋಗಳನ್ನು ಕಳುಹಿಸಿದ್ದರು.
ಬಳಿಕ ಯುವತಿಯು ಆ ವ್ಯಕ್ತಿ ಕಳುಹಿಸಿದ ಅಸಭ್ಯ ಫೋಟೋಗಳ ಆಧಾರದ ಮೇಲೆ ಬ್ಲ್ಯಾಕ್ಮೇಲ್ ಮಾಡುತ್ತಿದ್ದು ಹಣ ನೀಡುವಂತೆ ಬೇಡಿಕೆ ಇರಿಸಿದ್ದಾಳೆ. ಹಾಗೆಯೇ ಹಣ ನೀಡದಿದ್ದರೆ ಅಶ್ಲೀಲ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡುವುದಾಗಿ ಬೆದರಿಕೆ ಹಾಕಿದ್ದರು.
ಈ ಬಗ್ಗೆ ವ್ಯಕ್ತಿ ಕದ್ರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.