ಕಾಸರಗೋಡು, ನ. 14 (DaijiworldNews/MB) : ಕಳೆದ ಎಂಟು ತಿಂಗಳಿನಿಂದ ಸ್ಥಗಿತಗೊಂಡಿರುವ ಕಾಸರಗೋಡು ಮಂಗಳೂರು ನಡುವಿನ ಬಸ್ಸು ಸಂಚಾರ ಪುನರಾರಂಭಿಸುವ ಕುರಿತು ಸೋಮವಾರ ತೀರ್ಮಾನ ಹೊರಬೀಳಲಿದೆ.

ಸೋಮವಾರ ಉಭಯ ಜಿಲ್ಲೆಗಳ ಕೆಎಸ್ಆರ್ಟಿಸಿ ಬಸ್ಸು ಅಧಿಕಾರಿಗಳ ಮಾತುಕತೆ ನಡೆಯಲಿದೆ. ಸಭೆಯಲ್ಲಿ ಬಸ್ಸು ಸಂಚಾರ ಪುನರಾರಂಭದ ಬಗ್ಗೆ ಚರ್ಚಿಸಲಿದೆ.
ಕಾಸರಗೋಡು - ಮಂಗಳೂರು ನಡುವೆ ಉಭಯ ರಾಜ್ಯಗಳ ೮೦ ರಷ್ಟು ಬಸ್ಸುಗಳು ಸಂಚಾರ ನಡೆಸುತ್ತಿವೆ. ಕೋವಿಡ್ ಹಿನ್ನಲೆಯಲ್ಲಿ ಮಾರ್ಚ್ ಕೊನೆ ವಾರದಿಂದ ಸ್ಥಗಿತಗೊಳಿಸಲಾಗಿದ್ದ ಬಸ್ಸುಗಳು ಇನ್ನೂ ಆರಂಭಿಸಿಲ್ಲ. ಲಾಕ್ ಡೌನ್ ಸಡಿಲಿಕೆ ಬಳಿಕ ಸಂಚಾರ ಪುನರಾರಂಭಗೊಳ್ಳುವ ನಿರೀಕ್ಷೆ ಇದ್ದರೂ ಇನ್ನೂ ಆರಂಭಗೊಂಡಿಲ್ಲ. ಖಾಸಗಿ ವಾಹನಗಳಿಗೆ ಸಂಚಾರಕ್ಕೆ ಅನುವು ಮಾಡಿಕೊಡದಿರುವುದು ಕಾಸರಗೋಡಿನಿಂದ ದಿನಂಪ್ರತಿ ಮಂಗಳೂರಿಗೆ ತೆರಳುವ ವಿದ್ಯಾರ್ಥಿಗಳು, ಉದ್ಯೋಗಿಗಳು, ರೋಗಿಗಳು ಸೇರಿದಂತೆ ಸಾವಿರಾರು ಮಂದಿ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಬಸ್ಸು ಸಂಚಾರ ಪುನರಾರಂಭಿಸುವಂತೆ ಒತ್ತಾಯ ತೀವ್ರಗೊಳ್ಳುತ್ತಿದ್ದು, ಸೋಮವಾರ ನಡೆಯುವ ಅಧಿಕಾರಿಗಳ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಿದೆ.