ಮಂಗಳೂರು, ನ. 15 (DaijiworldNews/SM): ನಗರದಲ್ಲಿರುವ ಬೀದಿ ಬದಿ ವ್ಯಾಪಾರಿಗಳಿಗೆ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಸಂಸದ ನಳಿನ್ ಕುಮಾರ್ ಕಟೀಲ್ ಸಿಹಿ ಸುದ್ದಿ ನೀಡಿದ್ದಾರೆ. ಆತ್ಮ ನಿರ್ಬರ್ ಭಾರತ್ ಯೋಜನೆಯಡಿಯಲ್ಲಿ ಪ್ರತೀ ಬೀದಿ ಬದಿ ವ್ಯಾಪಾರಿಗಳಿಗೆ ಹತ್ತು ಸಾವಿರ ರೂಪಾಯಿ ಸಾಲ ಸೌಲಭ್ಯ ನೀಡುವ ಭರವಸೆ ನೀಡಿದ್ದಾರೆ.

ನಗರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ದ.ಕ ಜಿಲ್ಲೆಯಲ್ಲಿ ಏಳು ಸಾವಿರದಷ್ಟು ಬಿದಿ ಬದಿ ವ್ಯಾಪಾರಿಗಳಿಗೆ ಸಾಲ ನೀಡಲು ಅವಕಾಶವಿದೆ. ಈ ಬಗ್ಗೆ ಸಹಕಾರಿ ಬ್ಯಾಂಕುಗಳು ಗಮನ ಹರಿಸಬೇಕಿದೆ. ಯಾವುದೇ ಕಾನೂನು ಅಡ್ಡಿಬಂದರೆ ಅಂತಹ ಕಾನೂನುನನ್ನು ಕಟ್ ಮಾಡಿ ಎಂದಿದ್ದಾರೆ.
ಕುಮ್ಕಿ ಸಮಸ್ಯೆ ಶೀಘ್ರ ಪರಿಹಾರ:
ಇನ್ನು ರಾಜ್ಯದಲ್ಲಿ ಕುಮ್ಕಿ ಸಮಸ್ಯೆ ಹೆಚ್ಚಿನ ಪ್ರಮಾಣದಲ್ಲಿದೆ. ಕುಮ್ಕಿ ಸಮಸ್ಯೆ ಪರಿಹಾರಕ್ಕೆ ರಾಜ್ಯ ಸರಕಾರ ಬದ್ಧವಾಗಿದೆ. ಶಿಘ್ರದಲ್ಲೇ ಕುಮ್ಕಿ ಸಮಸ್ಯೆ ಪರಿಹಾರವಾಗಲಿದೆ. ಜೊತೆಗೆ ಮೂಲ ಗೇಣಿ ಸಮಸ್ಯೆ ಕೂಡ ಪರಿಹಾರವಾಗಲಿದೆ ಎಂದು ನಳಿನ್ ಕುಮಾರ್ ಕಟೀಲ್ ಭರವಸೆ ನೀಡಿದ್ದಾರೆ. ಇನ್ನು ಮುಂದಿನ ಎರಡು ವರ್ಷಗಳ ಕಾಲ ಬಿಎಸ್ ವೈ ನೇತೃತ್ವದಲ್ಲೇ ಸರಕಾರ ಇರಲಿದೆ. ಯಡಿಯೂರಪ್ಪನವರೇ ಮುಖ್ಯಮಂತ್ರಿಯಾಗಿ ಮುಂದುವರೆಯಲಿದ್ದಾರೆ. ಮುಂದಿನ ಅವಧಿಗೂ ನಾವೇ ಅಧಿಕಾರಕ್ಕೆ ಬರುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.