ಮಂಗಳೂರು, ನ. 16 (DaijiworldNews/MB) : ಮಾಧ್ಯಮ ಇತಿಹಾಸದಲ್ಲೇ ಮೊದಲ ಬಾರಿಗೆ ತುಳು ಲಿಪಿಯಲ್ಲಿ ದೈಜಿವರ್ಲ್ಡ್ ವಾಹಿನಿಯ ಲೋಗೋ ಬಿಡುಗಡೆಯಾಗಿದ್ದು ತುಳು ಲಿಪಿಯಲ್ಲಿ ಲೋಗೋ ಅಳವಡಿಸಿದ ಮೊದಲ ವಾಹಿನಿ ಎಂಬ ಹೆಗ್ಗಳಿಕೆಗೆ ದೈಜಿವರ್ಲ್ಡ್ ಪಾತ್ರವಾಗಿದೆ.

ತುಳು ಭಾಷೆ, ಲಿಪಿಯನ್ನು ಬೆಳೆಸುವ ನಿಟ್ಟಿನಲ್ಲಿ ಈಗಾಗಲೇ ಹಲವು ಕಾರ್ಯಕ್ರಮಗಳಿಗೆ ಮುನ್ನುಡಿ ಬರೆದಿರುವ ದೈಜಿವರ್ಲ್ಡ್ ವಾಹಿನಿ ಈಗ ಲಿಪಿಗೆ ಪ್ರಾತಿನಿಧ್ಯತೆ ನೀಡಲು ತಮ್ಮ ವಾಹಿನಿಯ ಲೋಗೋವನ್ನು ತುಳುವಿನಲ್ಲೇ ಸಿದ್ದಪಡಿಸಿದೆ. ಈ ಮೂಲಕ ತುಳು ಭಾಷೆಯನ್ನು ಬೆಳೆಸುವ ನಿಟ್ಟಿನಲ್ಲಿ ಹಾಗೂ ಮಾನ್ಯತೆ ನೀಡುವ ಸಲುವಾಗಿ ಹೊಸ ಪ್ರಯತ್ನಕ್ಕೆ ಮುಂದಾಗಿದೆ.
ತುಳು ಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇಧಕ್ಕೆ ಸೇರಿಸುವಂತೆ ತುಳು ನಾಡಿನಲ್ಲಿ ಆಗ್ರಹ ಹೆಚ್ಚಾಗುತ್ತಲ್ಲೇ ಇದ್ದು ಈ ನಿಟ್ಟಿನಲ್ಲಿ ರಾಜಕಾರಣಿಗಳು ಸೇರಿದಂತೆ ಪ್ರಮುಖರ ಗಮನ ಸೆಳೆಯಲು ದೈಜಿವರ್ಲ್ಡ್ ವಾಹಿನಿ ನಡೆಸಿರುವ ಯತ್ನ ಇದಾಗಿದೆ.
ಕರಾವಳಿ ಸೇರಿದಂತೆ ಮಾಧ್ಯಮ ಲೋಕಕ್ಕೆ ತುಳು ಲಿಪಿಯ ಲೋಗೋ ಹೊಸ ಪರಿಚಯವಾಗಿದ್ದು ತುಳು ಭಾಷೆ ಸಂವಿಧಾನದ 8ನೇ ಪರಿಚ್ಛೇಧಕ್ಕೆ ಸೇರಿಸುವ ಹೋರಾಟಕ್ಕೆ ದೈಜಿವರ್ಲ್ಡ್ ವಾಹಿನಿ ಈ ಮೂಲಕ ಕೈಜೋಡಿಸಿದೆ.