ಕಾಸರಗೋಡು, ನ. 16 (DaijiworldNews/MB) : ಲಾಕ್ಡೌನ್ ಹಿನ್ನೆಲೆಯಲ್ಲಿ ಮಾರ್ಚ್ನಿಂದ ಬಂದ್ ಆಗಿದ್ದು ಕಾಸರಗೋಡು ಮಂಗಳೂರು ನಡುವೆ ಬಸ್ಸು ಸಂಚಾರ ಎಂಟು ತಿಂಗಳ ಬಳಿಕ ಪುನರಾರಂಭವಾಗಿದೆ.

ಸೋಮವಾರದಿಂದ ಕೆಎಸ್ಆರ್ಟಿಸಿ ಬಸ್ಸುಗಳು ಸಂಚಾರ ಆರಂಭಿಸಿದೆ. ಕರ್ನಾಟಕದ 20, ಕೇರಳದ 20 ಬಸ್ಸುಗಳು ಇಂದಿನಿಂದ ಬಸ್ ಸಂಚಾರ ಆರಂಭ ಮಾಡಿದ್ದು ಏಳು ನಿಮಿಷಗಳ ಅಂತರದಲ್ಲಿ ಸಂಚರಿಸಲಿದೆ.
ಇನ್ನು ಮಂಗಳವಾರದಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಂತಿಮ ವರ್ಷದ ಯುಜಿ, ಪಿಜಿ ವಿದ್ಯಾರ್ಥಿಗಳಿಗೆ ನ. 17 ರಿಂದ ಕಾಲೇಜು ಆರಂಭವಾಗಲಿದ್ದು ಕಾಸರಗೋಡಿನಿಂದ ಜಿಲ್ಲೆಗೆ ವಿದ್ಯಾರ್ಜನೆಗೆ ಆಗಮಿಸುವ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಹಾಗೆಯೇ ವೈದ್ಯಕೀಯ, ಉದ್ಯೋಗ ಕಾರಣದಿಂದಾಗಿ ಉಭಯ ಜಿಲ್ಲೆಗಳ ನಡುವೆ ನಡೆಯುವ ಸಂಚಾರಕ್ಕೆ ಬಸ್ ಆರಂಭ ಸಹಾಯಕವಾಗಲಿದೆ.