ಮಂಗಳೂರು, ನ. 16 (DaijiworldNews/MB) : ಶನಿವಾರ ಮತ್ತು ಭಾನುವಾರದಂದು ಉಡುಪಿ ಮತ್ತು ದಕ್ಷಿಣ ಕನ್ನಡ ಉಭಯ ಜಿಲ್ಲೆಗಳ ವಿವಿಧ ದೇವಾಲಯಗಳಿಗೆ ಭೇಟಿ ನೀಡಲು ಹೆಚ್ಚಿನ ಸಂಖ್ಯೆಯ ಭಕ್ತರು ಮತ್ತು ಪ್ರವಾಸಿಗರು ಆಗಮಿಸಿದರು.

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ 'ತುಲಾಭಾರ' ಮತ್ತು 'ಅನ್ನಪ್ರಶಾನ' ಆಚರಣೆಗಳನ್ನು ನವೆಂಬರ್ 15 ರಿಂದ ಆರಂಭಿಸಲಾಗಿದೆ. ಸಾಂಕ್ರಾಮಿಕ ರೋಗದ ಭೀತಿಯಿಂದ ದೇವಸ್ಥಾನ ಮಾರ್ಚ್ನಲ್ಲಿ ಮುಚ್ಚಲಾಗಿದ್ದು ಒಂದು ತಿಂಗಳ ಹಿಂದೆ ಮತ್ತೆ ತೆರೆಯಲಾಗಿದೆ. ಆದರೆ ಈ ಎರಡು ಸೇವೆಗಳನ್ನು ಆರಂಭಿಸಿರಲಿಲ್ಲ. ಇದೀಗ ಆರಂಭಿಸಲಾಗಿದೆ.
ಅದೇ ರೀತಿ ಧರ್ಮಸ್ಥಳ ಮಂಜುನಾಥೇಶ್ವರ ದೇವಸ್ಥಾನ, ಸೌತಡ್ಕ ಮಹಾಗಣಪತಿ ದೇವಸ್ಥಾನಗಳಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ನೆರೆದಿದ್ದರು. ಅದೇ ರೀತಿ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಹತ್ತು ಸಾವಿರಕ್ಕೂ ಹೆಚ್ಚು ಭಕ್ತರು ಭೇಟಿ ನೀಡಿದರು.
ಸುಮಾರು ಆರು ತಿಂಗಳು ಮುಚ್ಚಿದ ಉಡುಪಿ ಶ್ರೀ ಕೃಷ್ಣ ಮಠವು ಸೆಪ್ಟೆಂಬರ್ 28 ರಂದು ಮತ್ತೆ ಬಾಗಿಲು ತೆರೆದಿದ್ದು ಮಠಕ್ಕೆ ನವೆಂಬರ್ 15 ರಂದು ಸುಮಾರು 5,000 ಜನರು ಭೇಟಿ ನೀಡಿದ್ದಾರೆ.
ಇನ್ನು ನಿರ್ದಿಷ್ಟವಾಗಿ ಮಲ್ಪೆ ಬೀಚ್ನಲ್ಲಿ ಹೆಚ್ಚಿನ ಸಂಖ್ಯೆಯ ಜನರು ಬಂದಿದ್ದರು. ಜನರು ಬೀಚ್ನಲ್ಲಿರುವ ಕ್ರೀಡೆ ಮತ್ತು ಇತರ ಮನರಂಜನಾ ಸೌಲಭ್ಯಗಳನ್ನು ಸಕ್ರಿಯವಾಗಿ ಬಳಸಿಕೊಂಡರು. ಉಡುಪಿ ಬಳಿಯ ಮಟ್ಟು ಸೇರಿದಂತೆ ಇತರ ಕಡಲತೀರಗಳಲ್ಲಿ ಹೆಚ್ಚಿನ ಜನರು ಸೇರಿದ್ದರು.