ಕಾಸರಗೋಡು,ನ. 16 (DaijiworldNews/HR): ಜಿಲ್ಲೆಯಲ್ಲಿ ಇಂದು 64 ಮಂದಿಯಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ.

54 ಮಂದಿಗೆ ಸಂಪರ್ಕದಿಂದ ಸೋಂಕು ತಗುಲಿದ್ದು, ಹೊರ ರಾಜ್ಯಗಳಿಂದ ಬಂದ ಆರು, ವಿದೇಶಗಳಿಂದ ಬಂದ ನಾಲ್ಕು ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ.
ಇನ್ನು 109 ಮಂದಿ ಗುಣಮುಖರಾಗಿದ್ದು, 1259 ಮಂದಿ ಈಗ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇದುವರೆಗೆ 20,466 ಮಂದಿಗೆ ಸೋಂಕು ತಗಲಿದ್ದು, 18,680 ಮಂದಿಗೆ ಸಂಪರ್ಕದಿಂದ ಸೋಂಕು ದೃಢಪಟ್ಟಿದ್ದು, 18,991 ಮಂದಿ ಗುಣಮುಖರಾಗಿದ್ದಾರೆ. 216 ಮಂದಿ ಮೃತಪಟ್ಟಿದ್ದಾರೆ.