ಕಾರವಾರ, ಜೂ 04: ಯುಪಿಎಸ್ ಸಿ ಪರೀಕ್ಷೆಗಾಗಿ ಕಳೆದ ಎರಡು ವರ್ಷಗಳಿಂದ ಶ್ರಮಪಟ್ಟಿದ್ದ ಕುಮುಟದ ಅಭ್ಯರ್ಥಿಯೊಬ್ಬ ಪರೀಕ್ಷಾ ಕೇಂದ್ರಕ್ಕೆ ತಡವಾಗಿ ಹೋದ್ದರಿಂದ ಪರೀಕ್ಷೆ ಬರೆಯಲು ಅವಕಾಶ ಸಿಗದೆ ನೊಂದು ಭಾನುವಾರ ಆತ್ಮಹತ್ಯೆ ಶರಣಾಗಿದ್ದಾರೆ. ಮೃತರು ಕುಮುಟಾದ ವರುಣ್ ಚಂದ್ರ (26) ಎಂದು ಗುರುತಿಸಲಾಗಿದೆ.
ಪರೀಕ್ಷೆ ಬರೆಯಲೆಂದು ಸಿದ್ದತೆ ಮಾಡಿಕೊಂಡಿದ್ದ ಅವರು ಗೊಂದಲಕ್ಕೆ ಒಳಗಾಗಿ ಬೇರೆ ಪರೀಕ್ಷಾ ಕೇಂದ್ರಕ್ಕೆ ಹೋಗಿದ್ದರು. ಅಲ್ಲಿಗೆ ತೆರಳಿದಾಗ ಇದು ತಮ್ಮ ಕೇಂದ್ರವಲ್ಲ ಎಂದು ಅರಿತು, ಪಹಾಡ್ಗಂಜ್ನ ಪರೀಕ್ಷಾ ಕೇಂದ್ರ ಬಂದಾಗ ಪರೀಕ್ಷೆ ಆರಂಭವಾಗಿತ್ತು. ಕೊಠಡಿ ಉಸ್ತುವಾರಿ ನೋಡಿಕೊಳ್ಳುತ್ತಿದ್ದವರು ನಿಯಮದ ಪ್ರಕಾರ ಅನುಮತಿ ನೀಡಲು ಸಾಧ್ಯವಿಲ್ಲ ಎಂದು ತಿಳಿಸಿದರು.
ಅಲ್ಲಿಂದ ತಾವು ಉಳಿದುಕೊಂಡಿದ್ದ ದೆಹಲಿಯ ಪಹಾಡ್ಗಂಜ್ನಲ್ಲಿದ್ದ ಕೊಠಡಿಗೆ ತೆರಳಿ ಸೂಸೈಡ್ ನೋಟ್ ಬರೆದು ಫ್ಯಾನ್ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆ ಬಗ್ಗೆ ರಾಜೇಂದರ್ ನಗರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಭಾರತೀಯ ವಿಜ್ಞಾನ ಸಂಸ್ಥೆಯ ಕುಮಟಾ ಶಾಖೆಯ ಮುಖ್ಯಸ್ಥರಾಗಿದ್ದ ವರುಣ್ ತಂದೆ ಸುಭಾಶ್ ಚಂದ್ರನ್ ವಿಜ್ಞಾನಿಯಾಗಿದ್ದರು. ಸೋಮವಾರ ಮತ್ತೊಂದು ಪರೀಕ್ಷೆ ಬರೆಯಲು
ದೆಹಲಿಯಿಂದ ಮುಂಬೈಗೆ ವಿಮಾನ ಟಿಕೆಟ್ ಕೂಡ ಬುಕ್ ಮಾಡಿದ್ದರು ಎಂದು ತಿಳಿದು ಬಂದಿದೆ.