ಮಂಗಳೂರು, ನ.17 (DaijiworldNews/PY): ಎಂಆರ್ಪಿಎಲ್ಗೆ ಬೃಹತ್ ತೈಲ ಸಂಸ್ಕರಣಾ ಯಂತ್ರೋಪಕರಣಗಳನ್ನು ಸಾಗಿಸುವ ಬೃಹತ್ ಗಾತ್ರದ ಎರಡು ಲಾರಿಗಳು ನಗರದ ಪಡೀಲ್ ಅಂಡರ್ ಪಾಸ್ ಬಳಿ ಕೆಳಗೆ ಸಂಚರಿಸಲಾಗದೇ ಬಾಕಿಯಾಗಿದ್ದು, ವಾಹನ ಸಂಚಾರಕ್ಕೆ ಅಡ್ಡಿಯುಂಟಾಗಿದೆ.




ನ.17ರ ಮಂಗಳವಾರ ಬೆಳಗ್ಗೆ ಈ ಘಟನೆ ನಡೆದಿದ್ದು, ವಾಹನಗಳನ್ನು ಬೇರೆಡೆಗೆ ತಿರುಗಿಸುವ ಪ್ರಯತ್ನಗಳು ನಡೆಯುತ್ತಿವೆ.
ಎರಡು ಬೃಹತ್ ಟ್ರಕ್ಗಳಲ್ಲಿ ಇಲ್ಲಿಂದ ಸ್ಥಳಾಂತರಿಸದಿದ್ದಲ್ಲಿ, ಟ್ರಾಫಿಕ್ ಬ್ಲಾಕ್ ಎದುರಾಗುವ ಅಪಾಯವಿದೆ.