ಮಂಗಳೂರು, ನ.17 (DaijiworldNews/PY): ದೈಜಿವರ್ಲ್ಡ್ನಲ್ಲಿ ಪ್ರಸಾರವಾಗುತ್ತಿರುವ ಕೊರೊನಾ ಗೆಲ್ಲೋಣ ಕಾರ್ಯಕ್ರಮವು ಇಂದು ಸಮಾಪ್ತಿಯಾಗಲಿದೆ.

ಕೊರೊನಾ ಗೆಲ್ಲೋಣ ಕಾರ್ಯಕ್ರಮದ 150ನೇ ಹಾಗೂ ಕೊನೆಯ ಸಂಚಿಕೆ ಇಂದು 7 ಗಂಟೆಗೆ ಪ್ರಸಾರವಾಗಲಿದ್ದು, ಈ ಕೊನೆಯ ಸಂಚಿಕೆಯಲ್ಲಿ ಬಾಯರು, ಚಿತ್ರಮೂಲ ಮಠದ ಶ್ರೀ ಕಾಳಿಕಾತನಯ ಶ್ರೀ ಶ್ರೀ ಉಮಾಮಹೇಶ್ವರ ತೀರ್ಥರು ಉಪಸ್ಥಿತರಿರಲಿದ್ದಾರೆ. ಅಲ್ಲದೇ, ಭಕ್ತಿಗೀತೆಗಳ ಗಾಯನ ಹಾಗೂ ಆಶೀವರ್ಚನ ನೀಡಲಿದ್ದಾರೆ.
ಈ ಕಾರ್ಯಕ್ರಮವು ಲಾಕ್ಡೌನ್ ಸಂದರ್ಭದಲ್ಲಿ ಮನೆಯೊಳಗೆ ಕುಳಿತುಕೊಳ್ಳಲು ನಿರ್ಬಂಧಿತರಾದ ವೀಕ್ಷಕರ ಮನೋಸ್ಥೈರ್ಯ ಹೆಚ್ಚಿಸುವ ಸಲುವಾಗಿ ಆರಂಭಗೊಂಡಿದ್ದು, ದೈಜಿವರ್ಲ್ಡ್ನ ಸಂಸ್ಥಾಪಕ ವಾಲ್ಟರ್ ನಂದಳಿಕೆ ಅವರ ಮುಂದಾಳತ್ವದಲ್ಲಿ ಈ ಕಾರ್ಯಕ್ರಮ ಮೂಡಿಬಂದಿದೆ.
ಯಾವುದೇ ಕಾರ್ಯಕ್ರಮಗಳಿಲ್ಲದೇ ಮನೆಯಲ್ಲೇ ಕುಳಿತಕೊಳ್ಳುವ ಅನಿವಾರ್ಯತೆಗೆ ಒಳಗಾದ ನೂರಾರು ಮಂದಿ ಕಲಾವಿದರನ್ನು ಟಿವಿ ಪರದೆಯ ಮುಂದೆ ತಂದು ವೀಕ್ಷಕರೊಡನೆ ಸಂವಾದ ನಡೆಸಲು ಅನುವಾದ ಮಾಡಿಕೊಟ್ಟ ಕಾರ್ಯಕ್ರಮವೇ ಕೊರೊನಾ ಗೆಲ್ಲೋಣ ಕಾರ್ಯಕ್ರಮ.
ಇನ್ನು ಈ ಕಾರ್ಯಕ್ರಮದಲ್ಲಿ ದ.ಕ ಸೇರಿದಂತೆ ಉಡುಪಿ ಕಾಸರಗೋಡು ಜಿಲ್ಲೆಗಳಿಂದ ಕಲಾವಿದರು ಭಾಗವಹಿಸಿದ್ದರು. ಇಡೀ ಕರಾವಳಿ ಸಂಜೆ 7 ಗಂಟೆಗೆ ಕಾಯುವಂತೆ ಮಾಡಿತ್ತು ಈ ಕಾರ್ಯಕ್ರಮ.
ಕೊರೊನಾ ಗೆಲ್ಲೋಣ ಕಾರ್ಯಕ್ರಮದಲ್ಲಿ ಕಲಾವಿದರು ಮಾತ್ರವಲ್ಲದೇ, ಅಥಿತಿಗಳಾಗಿ ಸ್ವಾಮೀಜಿಗಳು ಸೇರಿದಂತೆ ಬಿಷಪ್ ಅನಿ ಮುಸ್ಲಿಂ ಧಾರ್ಮಿಕ ಮುಖಂಡರೂ ಭಾಗವಹಿಸಿದ್ದರು.