ಮಂಗಳೂರು, ನ 17. (DaijiworldNews/HR): ಎಂಟು ತಿಂಗಳುಗಳ ಬಳಿಕ ಕೊರೊನಾ ಮಾರ್ಗಸೂಚಿಗಳೊಂದಿಗೆ ಕಾಲೇಜುಗಳು ಮತ್ತೆ ತೆರೆದಿದ್ದು, ಮಂಗಳೂರು ಮತ್ತು ಉಡುಪಿಯ ಜಿಲ್ಲೆಗಳಲ್ಲಿ ನವೆಂಬರ್ 17ರಿಂದ ಕಾಲೇಜುಗಳಲ್ಲಿ ತರಗತಿಗಳು ಪ್ರಾರಂಭವಾಗಿವೆ.





































ಕಾಲೇಜು ಪುನರಾರಂಭದ ಸಮಯದಲ್ಲಿ ಕಾಲೇಜನ್ನು ಸ್ವಚ್ಚಗೊಳಿಸುವುದು, ಮಾಸ್ಕ್ ಹಾಕುವುದು ಮತ್ತು ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವುದು ಮುಂತಾದ ನಿಯಮಾವಳಿಗಳನ್ನು ಜಿಲ್ಲಾಡಳಿತ ಸೂಚಿಸಿದೆ. ಕೊರೊನಾ ನೆಗೆಟಿವ್ ವರದಿಯಿಲ್ಲದೆ ವಿದ್ಯಾರ್ಥಿಗಳಿಗೆ ಕ್ಯಾಂಪಸ್ಗೆ ಪ್ರವೇಶಿಸಲು ಅವಕಾಶವಿಲ್ಲ ಮತ್ತು ಅನಾರೋಗ್ಯದ ವಿದ್ಯಾರ್ಥಿಗಳನ್ನು ಕ್ಯಾಂಪಸ್ನೊಳಗೆ ಪ್ರವೇಶಿಸುವಂತಿಲ್ಲ ಎಂದು ಹೇಳುವ ಆದೇಶವನ್ನು ಸರ್ಕಾರ ಕಟ್ಟುನಿಟ್ಟಾಗಿ ಜಾರಿಗೆ ತಂದಿದೆ.
ತರಗತಿಗಳು ಪುನರಾರಂಭಗೊಳ್ಳುವ ಮುನ್ನ ನವೆಂಬರ್ 16 ರಂದು ಮಂಗಳೂರು ಪ್ರಥಮ ದರ್ಜೆ ಕಾಲೇಜಿನ ಡಾ ಪಿ ಪಿ ದಯಾನಂದ ಪೈ, ಸತೀಶ್ ಪೈ ಕೊರೊನಾ ಪರೀಕ್ಷೆಯನ್ನು ಏರ್ಪಡಿಸಿದ್ದರು, ಇನ್ನು ಜಿಲ್ಲಾ ಆರೋಗ್ಯ ಅಧಿಕಾರಿ ಏರ್ಪಡಿಸಿದ್ದ ಕೊರೊನಾ ಪರೀಕ್ಷೆಗೆ 72 ಸಿಬ್ಬಂದಿ ಮತ್ತು 200 ವಿದ್ಯಾರ್ಥಿಗಳು ಒಳಗಾಗಿದ್ದರು.
ಇನ್ನು ದೈಜಿವರ್ಲ್ಡ್ ಜೊತೆ ಮಾತನಾಡಿದ ಮಿಲಾಗ್ರಿಸ್ ಕಾಲೇಜಿನ ಪ್ರಾಂಶುಪಾಲ ಮೈಕೆಲ್ ಸಂತುಮಾಯೋರ್, "ನವೆಂಬರ್ 17 ರಂದು ಕಾಲೇಜುಗಳನ್ನು ಪುನರಾರಂಭಿಸುವ ಸರ್ಕಾರದ ನಿರ್ಧಾರದ ನಂತರ, ನಾವು ವಿದ್ಯಾರ್ಥಿಗಳಿಗೆ ತಿಳಿಸಿದ್ದು, ಅಂತಿಮ ವರ್ಷದ ಪದವಿಯಲ್ಲಿ ನಾವು 300 ವಿದ್ಯಾರ್ಥಿಗಳನ್ನು ಹೊಂದಿದ್ದೇವೆ. ಅವರಲ್ಲಿ 100 ಮಂದಿ ನೋಂದಾಯಿಸಿಕೊಂಡಿದ್ದಾರೆ. ಕಾಲೇಜು ಪುನರಾರಂಭದ ಮೊದಲ ದಿನದಲ್ಲಿ ಕೇವಲ 15 ವಿದ್ಯಾರ್ಥಿಗಳು ಮಾತ್ರ ವರದಿಯೊಂದಿಗೆ ಕಾಲೇಜಿನಲ್ಲಿ ಕಾಣಿಸಿಕೊಂಡರೆ, ಉಳಿದ ವಿದ್ಯಾರ್ಥಿಗಳು ಮುಂದಿನ ದಿನಗಳಲ್ಲಿ ಸೇರಿಕೊಳ್ಳಲಿದ್ದಾರೆ ಏಕೆಂದರೆ ಕೆಲವು ವಿದ್ಯಾರ್ಥಿಗಳು ಇನ್ನೂ ತಮ್ಮ ಕೊರೊನಾ ವರದಿಯನ್ನು ಸ್ವೀಕರಿಸಿಲ್ಲ. ಎಲ್ಲಾ ಕ್ರಮಗಳು ಮತ್ತು ಸರ್ಕಾರ ಹೊರಡಿಸಿದ ನಿಯಮಗಳನ್ನು ಇಡೀ ಕ್ಯಾಂಪಸ್ನಲ್ಲಿ ಅನುಸರಿಸಲಾಗುವುದು. ಪ್ರತಿದಿನ ವಾಶ್ರೂಮ್ಗಳನ್ನು ಸ್ವಚ್ಚಗೊಳಿಸಲಾಗುವುದು. ನಾವು ಕಾಲೇಜಿನ ಪ್ರವೇಶದ್ವಾರದಲ್ಲಿ ವಿದ್ಯಾರ್ಥಿಗಳನ್ನು ಪರೀಕ್ಷಿಸುತ್ತಿದ್ದೇವೆ ಎಂದರು.
ಸೈಂಟ್ ಅಲೋಶಿಯಸ್ ಕಾಲೇಜಿನ ಪ್ರಾಂಶುಪಾಲ ಡಾ.ಪ್ರವೀಣ್ ಮಾರ್ಟಿಸ್ ಮಾತನಾಡಿ, "ನಾವು ಸರ್ಕಾರದ ನಿಯಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸುತ್ತಿದ್ದೇವೆ. ಕೊರೊನಾ ಪ್ರಮಾಣ ಪತ್ರಗಳೊಂದಿಗೆ ಬರುವ ವಿದ್ಯಾರ್ಥಿಗಳನ್ನು ಕ್ಯಾಂಪಸ್ಗೆ ಬರಲು ಅವಕಾಶವನ್ನು ಕಲ್ಪಿಸುತ್ತಿದ್ದೇವೆ. ನಾವು ಎರಡು ಸಣ್ಣ ಗುಂಪುಗಳನ್ನು ಮತ್ತು ಎರಡು ವೇಳಾಪಟ್ಟಿಗಳನ್ನು ಮಾಡಿದ್ದೇವೆ - ಬೆಳಿಗ್ಗೆ 9.00 ರಿಂದ 1.00 ಮತ್ತು ಮಧ್ಯಾಹ್ನ 12.00 ರಿಂದ 4.00 ರವರೆಗೆ. ಕೇವಲ ಶೇ.30ರಷ್ಟು ವಿದ್ಯಾರ್ಥಿಗಳು ಮಾತ್ರ ಮೊದಲ ದಿನ ಕಾಲೇಜಿಗೆ ಬಂದಿದ್ದಾರೆ ಎಂದರು.
ಉಡುಪಿಯಲ್ಲಿ ಮಂಗಳವಾರದಿಂದ ಕಾರ್ಯನಿರ್ವಹಿಸಬೇಕಿದ್ದ ಪದವಿ ಕಾಲೇಜುಗಳಿಗೆ ವಿದ್ಯಾರ್ಥಿಗಳ ಪ್ರತಿಕ್ರಿಯೆ ಮಿಶ್ರವಾಗಿದೆ. ಇಲ್ಲಿನ ಕೆಲವು ಸರ್ಕಾರಿ ಕಾಲೇಜುಗಳಲ್ಲಿ, ಶೇ.50 ರಷ್ಟು ವಿದ್ಯಾರ್ಥಿಗಳು ಆಗಮಿಸಿದ್ದಾರೆ.
ಆನ್ಲೈನ್ ಮತ್ತು ಆಫ್ಲೈನ್ ತರಗತಿಗಳನ್ನು ಮುಂದುವರಿಸಲು ಸರ್ಕಾರ ಅನುಮತಿಸಿರುವುದರಿಂದ, ಅನೇಕ ವಿದ್ಯಾರ್ಥಿಗಳು ಆನ್ಲೈನ್ ತರಗತಿಗಳಿಗೆ ಹಾಜರಾಗಲು ನಿರ್ಧರಿಸಿದ್ದಾರೆ. ನಗರದ ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ಶೇ.50 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಜರಿದ್ದರು.
ಸ್ಯಾನಿಟೈಸರ್ಗಳನ್ನು ಬಳಸಲು, ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಲು ಮತ್ತು ಮಾಸ್ಕ್ ಧರಿಸಲು ವಿದ್ಯಾರ್ಥಿಗಳನ್ನು ಹೇಳಲಾಗುತ್ತಿದೆ. ಆರೋಗ್ಯ ಇಲಾಖೆಯ ಸಹಯೋಗದೊಂದಿಗೆ, ಕೊರೊನಾ ಪರೀಕ್ಷೆಗಳಿಗೆ ಸಹ ವ್ಯವಸ್ಥೆ ಮಾಡಲಾಗಿದೆ.