ಕಾಸರಗೋಡು, ನ.17 (DaijiworldNews/PY): ಡಿ.14ರಂದು ನಡೆಯುವ ಸ್ಥಳೀಯಾಡಳಿತ ಸಂಸ್ಥೆ ಚುನಾವಣೆಗೆ ಇದುವರೆಗೆ 638 ಮಂದಿ ನಾಮಪತ್ರ ಸಲ್ಲಿಸಿದ್ದಾರೆ.

ಸಾಂದರ್ಭಿಕ ಚಿತ್ರ
ಇಲ್ಲಿಯವರೆಗೆ ಜಿಲ್ಲಾ ಪಂಚಾಯತ್ಗೆ ಎರಡು, ಬ್ಲಾಕ್ ಪಂಚಾಯತ್ಗಳಿಗೆ 41, ಗ್ರಾಮ ಪಂಚಾಯತ್ಗಳಿಗೆ 484, ನಗರಸಭೆಗಳಿಗೆ 41ಮಂದಿ ನಾಮಪತ್ರ ಸಲ್ಲಿಸಲಾಗಿದೆ.
ಜಿಲ್ಲಾ ಪಂಚಾಯತ್, ಆರು ಬ್ಲಾಕ್ ಪಂಚಾಯತ್ , ಮೂರು ನಗರಸಭೆ, 38 ಗ್ರಾಮ ಪಂಚಾಯತ್ ಗಳಿಗೆ ಚುನಾವಣೆ ನಡೆಯಲಿದೆ.
ನವೆಂಬರ್ 19 ರವರೆಗೆ ನಾಮಪತ್ರ ಸಲ್ಲಿಸಬಹುದಾಗಿದೆ. 20 ರಂದು ಸೂಕ್ಷ್ಮ ಪರಿಶೀಲನೆ ನಡೆಯಲಿದೆ. 23 ರಂದು ನಾಮಪತ್ರ ಹಿಂತೆಗೆಯಲು ಕೊನೆ ದಿನವಾಗಿದೆ. ಕಾಸರಗೋಡು ಜಿಲ್ಲೆಯಲ್ಲಿ ಡಿ.14ರಂದು ಚುನಾವಣೆ ನಡೆಯಲಿದೆ. ಫಲಿತಾಂಶ ಡಿ. 16 ರಂದು ಹೊರ ಬೀಳಲಿದೆ.