ಉಡುಪಿ, ನ. 17 (DaijiworldNews/SM): ಕೃಷಿ ಮಸೂದೆ ತಿದ್ದುಪಡಿಯು ರೈತರಿಗೆ ಕೆಂದ್ರ ಮತ್ತು ರಾಜ್ಯ ಸರಕಾರದ ಮರಣ ಶಾಸನ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ್ಯ ಸಲೀಂ ಅಹ್ಮದ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಉಡುಪಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ರೈತ ವಿರೋಧಿ ಮಸೂದೆಗಳ ವಿರುದ್ದ ನಡೆದ ಬೃಹತ್ ಸಹಿ ಸಂಗ್ರಹ ಅಭಿಯಾನ ಮತ್ತು ಸಹಿ ಹಸ್ತಾಂತರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ರೈತ ವಿರೋಧಿ ಕಾನೂನಿನ ವಿರುದ್ದವಾಗಿ ದೇಶಾದ್ಯಾಂತ ಸುಮಾರು 2 ಕೋಟಿಗೂ ಅಧಿಕ ಸಹಿಗಳನ್ನು ಸಂಗ್ರಹಿಸಿ ಎಐಸಿಸಿ ಮೂಲಕ ರಾಷ್ಟ್ರಪತಿಗಳಿಗೆ ಸಲ್ಲಿಸಲಾಗುವುದು. ಎಪಿಎಂಸಿ ಕಾಯ್ದೆ ರೈತವಿರೋಧಿ ಕಾಯ್ದೆಯಾಗಿದೆ. ಈ ಕಾಯಿದೆಯನ್ನು ವಾಪಾಸ್ ಪಡೆಯಬೇಕು ಎಂಬಆಗ್ರಹವನ್ನು ಕಾಂಗ್ರೆಸ್ ಮಾಡುತ್ತಿದೆ. ರಾಜ್ಯ ಮತ್ತು ಕೇಂದ್ರ ಸರಕಾರ ರೈತರ ರಕ್ಷಣೆಯಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿದರು.
ರಾಜ್ಯದಲ್ಲಿ ರೈತರಿಗೆ ಮರಣ ಶಾಸನ ಕಾದಿದೆ. ಕೊರೊನಾ ವಿಚಾರದಲ್ಲು ಸರಕಾರ ಸುಮಾರು 2,000 ಕೋಟಿಯಷ್ಟು ಹಗರಣ ನಡೆದಿದೆ. ಕಾನೂನು ಸುವ್ಯವಸ್ಥೆ ಮತ್ತು ಡ್ರಗ್ಸ್ ವಿಚಾರದಲ್ಲಿ ಕೂಡಾ ಈ ಸರಕಾರ ವಿಫಲವಾಗಿದೆ ಎಂದರು. ಇದೇ ಸಂಧರ್ಭದಲ್ಲಿ ಸುಮಾರು 1111 ಬೂತ್ ಗಳಿಂದ ಸಂಗ್ರಹಿಸಿದ ಸುಮಾರು 1 ಲಕ್ಷ ಸಹಿಗಳನ್ನು 2 ಕಿ.ಮಿ. ಉದ್ದ ಪಾದಾಯಾತ್ರೆ ಮಾಡಿ ಪ್ರದರ್ಶಿಸಲಾಯಿತು.