ಕಾಸರಗೋಡು, ನ. 18 (DaijiworldNews/MB) : ಡಿ . 14 ರಂದು ನಡೆಯಲಿರುವ ಕಾಸರಗೋಡು ಜಿಲ್ಲಾ ಪಂಚಾಯತ್ ಚುನಾವಣೆಗೆ ಪ್ರಮುಖ ಪಕ್ಷಗಳು ಅಭ್ಯರ್ಥಿಗಳನ್ನು ಅಂತಿಮಗೊಳಿಸಿದೆ. ಮೂರು ಪಕ್ಷಗಳು ಹೊಸ ಮುಖದ ಜೊತೆಗೆ ಯುವಕರಿಗೆ ಪ್ರಾಶಸ್ತ್ಯ ನೀಡಿದೆ.

ಎಲ್ಡಿಎಫ್ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸಿದೆ. 17 ಸ್ಥಾನಗಳ ಪೈಕಿ ಸಿಪಿಐಎಂ ಹತ್ತು ಸ್ಥಾನಗಳಲ್ಲಿ ಸ್ಪರ್ಧಿಸಲಿದೆ. ಸಿಪಿಐ 3, ಕೇರಳ ಕಾಂಗ್ರೆಸ್ ಎಂ, ಎಲ್ಜೆ ಡಿ, ಐಎನ್ಎಲ್ಗೆ ತಲಾ ಒಂದು ಸ್ಥಾನ ನೀಡಲಾಗಿದೆ.
ಯುಡಿಎಫ್ನಲ್ಲಿ ಕಾಂಗ್ರೆಸ್ ಹಾಗೂ ಮುಸ್ಲಿಂ ಲೀಗ್ ತಲಾ ಎಂಟು ಸ್ಥಾನಗಳಲ್ಲಿ ಸ್ಪರ್ಧಿಸಲಿದೆ. ಒಂದು ಸ್ಥಾನ ಸಿಎಂಪಿಗೆ ನೀಡಲಾಗಿದೆ. ಬಿಜೆಪಿ 17 ಸ್ಥಾನಗಳಲ್ಲಿಯೂ ಸ್ಪರ್ಧಿಸಲಿದೆ.
ಕಳೆದ ಬಾರಿ ಯುಡಿಎಫ್ 8 , ಎಲ್ಡಿ ಎಫ್ 7 , ಬಿಜೆಪಿ 2 ಸ್ಥಾನ ಪಡೆದಿತ್ತು.
ನಾಮಪತ್ರ ಸಲ್ಲಿಸಲು ನಾಳೆ ಕೊನೆ ದಿನವಾಗಿದೆ. ಜಿಲ್ಲಾ ಪಂಚಾಯತ್ ಅಲ್ಲದೆ ಆರು ಬ್ಲಾಕ್ ಪಂಚಾಯತ್, ಮೂರು ನಗರಸಭೆ, 38 ಗ್ರಾಮ ಪಂಚಾಯತ್ಗಳಿಗೆ ಚುನಾವಣೆ ನಡೆಯಲಿದ್ದು, ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಮುಂದುವರಿದಿದೆ.