ಮಂಗಳೂರು, ನ. 18 (DaijiworldNews/MB) : ಗಾಳಿಪಟದ ದಾರಕ್ಕೆ ಸಿಲುಕಿ ಒದ್ದಾಡುತ್ತಿದ್ದ ಗಿಡುಗವೊಂದನ್ನು ಮೂವರು ಪೊಲೀಸರು ರಕ್ಷಿಸಿದ ಘಟನೆ ನಗರದಲ್ಲಿ ನಡೆದಿದ್ದು ಪೊಲೀಸರ ಈ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.



ಗಾಳಿಪಟದ ದಾರಕ್ಕೆ ಸಿಲುಕಿ ಒದ್ದಾಡುತ್ತಿದ್ದ ಗಿಡುಗವೊಂದನ್ನು ಕರ್ತವ್ಯದಲ್ಲಿದ್ದ ಪೊಲೀಸ್ ಸಿಬ್ಬಂದಿಗಳಾದ ಹರ್ಷಿತ್, ಪ್ರೇಮನಾಥ್, ನಾರಾಯಣ್ ಅವರು ದಾರದಿಂದ ಬಿಡಿಸಿ, ಅದರ ಆರೈಕೆ ಮಾಡಿದ್ದಾರೆ. ಬಳಿಕ ಗಿಡುಗವನ್ನು ಮತ್ತೆ ಸ್ವಚ್ಚಂದವಾಗಿ ಹಾರಾಡಲು ಬಿಟ್ಟಿದ್ದಾರೆ.
ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು ಪೊಲೀಸರ ಈ ಕಾರ್ಯಕ್ಕೆ ಭಾರೀ ಶ್ಲಾಘನೆ ವ್ಯಕ್ತವಾಗಿದೆ.
ಹಲವು ಕಡೆಗಳಲ್ಲಿ ಗಾಳಿಪಟವನ್ನು ಹಾಗೆಯೇ ಹಾರಲು ಬಿಡಲಾಗುತ್ತದೆ. ಹಾಗೆ ಬಾನಿನತ್ತ ಹಾರಿದ ಗಾಳಿಪಟವು ಹಕ್ಕಿಗಳಿಗೆ ತೊಂದರೆ ಉಂಟು ಮಾಡುತ್ತದೆ. ಗಾಳಿಪಟ ಪ್ರಿಯರು ಈ ಬಗ್ಗೆ ಗಮನವಹಿಸಬೇಕಾಗಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.