ಮಂಗಳೂರು, ನ.18 (DaijiworldNews/PY): "ದ.ಕ ಜಿಲ್ಲೆಯಲ್ಲಿ ಎಲ್ಲಾ ಜಾತಿಯವರು ಇದ್ದಾರೆ. ಬಿಲ್ಲವ, ಗಟ್ಟಿ, ಬಂಟ, ಕೊಟ್ಟಾರಿ, ಗಾಣಿಗ, ಕುಲಾಲ ಸಮುದಾಯಗಳ ನಿಗಮ ಮಾಡಲಿ. ದ.ಕ ಜಿಲ್ಲೆಯ ಎಲ್ಲಾ ಜಾತಿಗೆ ಅಭಿವೃದ್ಧಿ ನಿಗಮ ಬೇಕು" ಎಂದು ಮಾಜಿ ಸಚಿವ ಯು.ಟಿ. ಖಾದರ್ ಹೇಳಿದರು.

ರಾಜ್ಯ ಸರ್ಕಾರದಿಂದ ಮಾರಾಠಿ ಅಭಿವೃದ್ಧಿ ಘೋಷಣೆ ಹಿನ್ನೆಲೆ ಮಂಗಳೂರಿನಲ್ಲಿ ಮಾತನಾಡಿದ ಅವರು, "ಶಿರಾ ಉಪಚುನಾವಣೆ ಬಂದಾಗ ಗೊಲ್ಲರ ಅಭಿವೃದ್ಧಿ ನಿಗಮ ಮಾಡಿದ್ದರು. ಬಸವ ಕಲ್ಯಾಣ ನಿಗಮ ಮುಂದಿಟ್ಟು ಮರಾಠಿ ಅಭಿವೃದ್ಧಿ ನಿಗಮ ಮಾಡುತ್ತಿದ್ದಾರೆ. ಉಪಚುನಾವಣೆ ಬಂದರೆ ಮಾತ್ರ ಅಭಿವೃದ್ಧಿ ನಿಗಮ ಘೋಷಣೆ ಮಾಡುತ್ತಾರೆ. ರಾಜ್ಯದ ಜನತೆಗೆ ಯಾರು ಜಾತಿ ಓಲೈಕೆ ಮಾಡುತ್ತಿದ್ದಾರೆ ಎಂದು ಗೊತ್ತಾಗುತ್ತಿದೆ" ಎಂದರು.
"ದ.ಕ. ಜಿಲ್ಲೆಯಲ್ಲಿ ಎಲ್ಲಾ ಜಾತಿಯವರೂ ಇದ್ದಾರೆ. ಎಲ್ಲಾ ಜಾತಿಯ ನಿಗಮವೂ ಬೇಕು. ಬಿಲ್ಲವ, ಗಟ್ಟಿ, ಬಂಟ, ಕೊಟ್ಟಾರಿ, ಗಾಣಿಗ, ಕುಲಾಲ ಸಮುದಾಯಗಳ ನಿಗಮ ಮಾಡಲಿ. ದ.ಕ ಜಿಲ್ಲೆಯ ಎಲ್ಲಾ ಜಾತಿಗೆ ಅಭಿವೃದ್ಧಿ ನಿಗಮ ಬೇಕು. ರಾಜ್ಯದ ಬೊಕ್ಕಸದಲ್ಲಿ ದ.ಕ ಜಿಲ್ಲೆಯವರಿಗೂ ಹಕ್ಕಿದೆ" ಎಂದು ಖಾದರ್ ಆಗ್ರಹಿಸಿದರು.