ಮಂಗಳೂರು, ನ. 18 (DaijiworldNews/MB) : ಯುವಕನೋರ್ವ ತನ್ನ ಪರಿಚಯದ ವಿವಾಹಿತ ಮಹಿಳೆಯೊಬ್ಬರನ್ನು ಮುಕ್ಕದ ತನ್ನ ಬಾಡಿಗೆ ಮನೆಯಲ್ಲಿ ಕೊಂದು ತಾನು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬುಧವಾರ ಬೆಳಕಿಗೆ ಬಂದಿದೆ.

ಮೃತರನ್ನು ಸುರತ್ಕಲ್ ಮುಖ್ಯ ಬಸ್ ನಿಲ್ದಾಣದಲ್ಲಿ ಹೂವಿನ ವ್ಯಾಪಾರಿಯಾಗಿದ್ದ ಕುಳಾಯಿ ರೈಲ್ವೆ ಬ್ರಿಜ್ ಬಳಿಯ ನಿವಾಸಿ ವಸಂತ್ ಕುಮಾರ್ (36) ಹಾಗೂ ಈತನ ಪರಿಚಯದ ರೇಖಾ (42) ಎಂಬ ವಿವಾಹಿತ ಮಹಿಳೆ ಎಂದು ಗುರುತಿಸಲಾಗಿದೆ. ಮಂಗಳವಾರ ಸಂಜೆ 3 ಗಂಟೆ ಸುಮಾರಿನ ಬಳಿಕ ಈ ಘಟನೆ ನಡೆದಿರಬೇಕು ಎಂದು ಶಂಕಿಸಲಾಗಿದೆ.
ವಸಂತ್ ಕುಮಾರ್ ತನಗೆ ಪರಿಚಯದ ರೇಖಾ ಎಂಬ ವಿವಾಹಿತ ಮಹಿಳೆಯನ್ನು ತನ್ನ ಬಾಡಿಗೆ ಮನೆಗೆ ಮಂಗಳವಾರ ಸಂಜೆ 3 ಗಂಟೆ ಬಳಿ ಕರೆದೊಯ್ದಿದ್ದ ಎನ್ನಲಾಗಿದೆ. ಈಕೆ ಸುರತ್ಕಲ್ ಬಳಿಯ ಬೃಹತ್ ಉದ್ಯಮವೊಂದರ ಟೌನ್ ಶಿಪ್ ನಿವಾಸಿ, ಬೃಹತ್ ಉದ್ಯಮವೊಂದರ ಉದ್ಯೋಗಿಯ ಪತ್ನಿ ಎಂದು ತಿಳಿದು ಬಂದಿದೆ.
ಈ ಮನೆಯಲ್ಲಿ ಬಲಿ ನೀಡಿದ ಕೋಳಿ, ಲಿಂಬೆ ಹುಳಿ, ಕುಂಬಳಕಾಯಿ ಇತ್ಯಾದಿ ಪತ್ತೆಯಾಗಿದ್ದು ಈಕೆ ಮಹಿಳೆಯನ್ನು ವಶೀಕರಣಕ್ಕೆ ಯತ್ನಿಸಿದ್ದು ಇದಕ್ಕೆ ಆಕೆ ಸಹಕರಿಸದಿದ್ದಾಗ, ಆಕೆಯನ್ನು ಕೊಲೆಗೈದು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಶಂಕಿಸಲಾಗಿದೆ.
ಸ್ಥಳಕ್ಕೆ, ಮಂಗಳೂರು ಡಿಸಿಪಿ, ಪಣಂಬೂರು ಎಸಿಪಿಕೆಯು ಬೆಳ್ಳಿಯಪ್ಪ, ಸುರತ್ಕಲ್ ಪಿಐ ಚಂದ್ರಪ್ಪ, ಎಸ್ ಐ ಸುಂದರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಮುಂದಿನ ತನಿಖೆ ನಡೆಯುತ್ತಿದೆ.