ಕಾಸರಗೋಡು, ನ.18 (DaijiworldNews/PY): ಜಿಲ್ಲಾ ಪಂಚಾಯತ್ ಸದಸ್ಯ ಶಾನ್ ವಾಜ್ ಪಾದೂರು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಕಾಂಗ್ರೆಸ್ಗೆ ರಾಜೀನಾಮೆ ನೀಡಿರುವ ಶಾನ್ ವಾಜ್ ಎಲ್ಡಿಎಫ್ ಬೆಂಬಲಿತ ಅಭ್ಯರ್ಥಿಯಾಗಿ ಚೆಂಗಳ ವಾರ್ಡ್ನಿಂದ ಜಿಲ್ಲಾ ಪಂಚಾಯತ್ಗೆ ಸ್ಪರ್ದಿಸಲಿದ್ದಾರೆ.

2015ರಲ್ಲಿ ನಡೆದ ಚುನಾವಣೆಯಲ್ಲಿ ಶಾನ್ ವಾಜ್ ಅವರ ತಂದೆ ಪಾದೂರು ಕುಂಞಮು ಕಾಂಗ್ರೆಸ್ನಿಂದ ಗೆಲುವು ಸಾಧಿಸಿದ್ದರು. ಕುಂಞಮು ಅವರ ಅಕಾಲಿಕ ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ ಪುತ್ರ ಶಾನ್ ವಾಜ್ ಅವರನ್ನು ಕಣಕ್ಕಿಳಿಸಿ ಗೆಲುವು ಸಾಧಿಸಿದ್ದರು. ಜಿಲ್ಲಾ ಪಂಚಾಯತ್ ಶಿಕ್ಷಣ ಸ್ಥಾಯಿ ಸ್ಥಾಯಿ ಸಮಿತಿ ಅಧ್ಯಕ್ಷರಾಗಿದ್ದರು.
ಯುಡಿಎಫ್ ಗೆದ್ದ 8 ಕ್ಷೇತ್ರಗಳಲ್ಲಿ ಮುಸ್ಲಿಂ ಲೀಗ್ ಮತ್ತು ಕಾಂಗ್ರೆಸ್ ತಲಾ ನಾಲ್ಕು ಸ್ಥಾನಗಳನ್ನು ಪಡೆದಿತ್ತು.
ಇದರಿಂದ ಐದು ವರ್ಷದಲ್ಲಿ ತಲಾ ಎರಡೂವರೆ ವರ್ಷ ಅಧಿಕಾರ ಹಂಚಿಕೆ ಬಗ್ಗೆ ತೀರ್ಮಾನಿಸಲಾಗಿತ್ತು. ಆದರೆ ಮುಸ್ಲಿಂ ಲೀಗ್ ಇದಕ್ಕೆ ಸಮ್ಮತಿಸದ ಹಿನ್ನಲೆಯಲ್ಲಿ ಶಾನ್ ವಾಜ್ ಅತೃಪ್ತಿಗೊಂಡಿದ್ದರು.
ಕಳೆದ ಒಂದು ವರ್ಷಗಳಿಂದ ಶಾನ್ ವಾಜ್ ಕಾಂಗ್ರೆಸ್ನಿಂದ ದೂರ ಉಳಿದಿದ್ದರು. ಕೊನೆಗೂ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ.