ಉಡುಪಿ, ನ. 18 (DaijiworldNews/SM): ಎಟಿಎಂ ಕಾರ್ಡ್ ಹಾಗೂ ಯಾವುದೇ ಬ್ಯಾಂಕ್ ದಾಖಲೆಗಳಿಲ್ಲದೆ, ವ್ಯಕ್ತಿಯೊಬ್ಬರ ಬ್ಯಾಂಕ್ ಖಾತೆಯಿಂದ ಅಪರಿಚಿತ ಖದೀಮರು ಹಣ ವಿತ್ ಡ್ರಾ ಮಾಡಿರುವ ಘಟನೆ ನಡೆದಿದೆ. ಉಡುಪಿಯ ಮೂಡುಬೆಟ್ಟು ನಿವಾಸಿ ಹಣ ಕಳೆದುಕೊಂಡವರಾಗಿದ್ದಾರೆ. ಅಪರಿಚಿತ ಕಿಡಿಗೇಡಿಗಳು ಬೆಂಗಳೂರಿನ ಅಲಂಕಾರ್ ಫ್ಲಾಜಾ ಎಂಬಲ್ಲಿ ಹಣ ವಿತ್ ಡ್ರಾ ಮಾಡಿರುವುದಾಗಿ ತಿಳಿದುಬಂದಿದೆ.

ಉಡುಪಿ ಮೂಲದ ಮೂಡುಬೆಟ್ಟು ನಿವಾಸಿ ಸದಾನಂದ ಭಂಡಾರಿ(62) ಹಣ ಕಳೆದುಕೊಂಡವರಾಗಿದ್ದಾರೆ. ಇವರು ಉಡುಪಿಯಲ್ಲಿ ಕೆನರಾ ಬ್ಯಾಂಕ್ ಶಾಖೆಯಲ್ಲಿ ಬ್ಯಾಂಕ್ ಖಾತೆ ಹೊಂದಿದ್ದಾರೆ. ಇವರ ಖಾತೆಯಿಂದ 10,000 ರೂಪಾಯಿಗಳಂತೆ ಒಟ್ಟು ರೂಪಾಯಿ 40,000 ರೂಪಾಯಿ ವಿತ್ ಡ್ರಾ ಆಗಿದೆ ಎಂದು ತಿಳಿದುಬಂದಿದೆ. ಕಿಡಿಗೇಡಿಗಳು ಯಾವ ರೀತಿಯಲ್ಲಿ ಹಣ ವಿತ್ ಡ್ರಾ ಮಾಡಿದ್ದಾರೆ ಎಂಬುವುದಾಗಿ ತಿಳಿದುಬಂದಿಲ್ಲ. ಮೊಬೈಲ್ ಗೆ ಬಂದ ಸಂದೇಶದ ಆಧಾರದಲ್ಲಿ ಹಣ ವಿತ್ ಡ್ರಾ ಆಗಿರುವುದು ತಿಳಿದುಬಂದಿದೆ.
ಈ ಬಗ್ಗೆ ಸದಾನಂದ ಭಂಡಾರಿಯವರು ಸೆನ್ ಅಪರಾಧ ಪೊಲೀಸ್ ಠಾಣೆಗೆ ದೂರು ನೀಡಿದ್ದು ಆರೋಪಿಗಳ ಪತ್ತೆಗಾಗಿ ಶೋಧ ಮುಂದುವರೆಸಲಾಗಿದೆ.