ಪುತ್ತೂರು, ನ.20 (DaijiworldNews/PY): ಜನರಿಂದ ಸಾವಿರಾರು ರೂಪಾಯಿ ಪಡೆದು ವಂಚಿಸಿದ ನಕಲಿ ಜ್ಯೋತಿಷಿಯ ವಿಡಿಯೋವೊಂದು ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ವರದಿಯ ಪ್ರಕಾರ, ಮಂಡ್ಯದ ವ್ಯಕ್ತಿಯೋರ್ವ ಜ್ಯೋತಿಷಿಯಂತೆ ನಟಿಸಿ ಹಲವಾರು ಮಂದಿಗೆ ವಂಚಿಸಿದ್ದಾನೆ ಎಂದು ಹೇಳಲಾಗಿದೆ. ಈ ಘಟನೆ ಉಪ್ಪಿನಂಗಡಿಯಲ್ಲಿ ನಡೆದಿದೆ.
ಜ್ಯೋತಿಷಿ ಹಲವಾರು ಜನರಿಂದ ಹಣ ತೆಗೆದುಕೊಂಡು ವಂಚನೆ ಮಾಡಿರುವ ಬಗ್ಗೆ ಜನರಿಗೆ ತಿಳಿದು ಬಂದಿದ್ದು, ಬಳಿಕ ಅವರು ಜ್ಯೋತಿಷಿಯ ಕಚೇರಿಗೆ ಧಾವಿಸಿ ತಮ್ಮ ಹಣವನ್ನು ಮರುಪಾವತಿಸುವಂತೆ ಒತ್ತಾಯಿಸಿದ್ದಾರೆ. ನಕಲಿ ಜ್ಯೋತಿಷಿ ಕೂಡಾ ಗೂಗಲ್ ಪೇ ಮೂಲಕ ಹಣವನ್ನು ಮರುಪಾವತಿ ಮಾಡಿದ್ದಾರೆ ಎಂದು ಹೇಳಲಾಗಿದೆ.
ವಿಡಿಯೋದಲ್ಲಿ, ಮಹಿಳೆಯೋರ್ವರು ಮನೆಯಿಂದ ಚಿನ್ನಾಭರಣ ತಂದು ಅಡ ಇಟ್ಟು ಜ್ಯೋತಿಷಿಗೆ ಹಣ ನೀಡಿದ್ದಾರೆ ಎಂದು ಹೇಳುತ್ತಿದ್ದಾರೆ.
ಪೊಲೀಸ್ ಮೂಲಗಳ ಪ್ರಕಾರ, ಯಾರೂ ಕೂಡಾ ನಕಲಿ ಜ್ಯೋತಿಷಿಯ ವಿರುದ್ದ ದೂರು ದಾಖಲಿಸಿಲ್ಲ ಎನ್ನಲಾಗಿದೆ.